ಹವಾಮಾನ ಇಲಾಖೆ ಮುನ್ಸೂಚನೆ : ಮಂಗಳೂರಿನ ಸಮುದ್ರ ತೀರದಲ್ಲಿ ಕಟ್ಟೆಚ್ಚರ

Weather Forecast In Coastal
Highlights

ಕೇರಳದಲ್ಲಿ ಸಮುದ್ರ ಅಲೆಗಳ ಎತ್ತರದ ಏರಿಕೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ನಿಗಾ ಇರಿಸಿದೆ. ಸೋಮೇಶ್ವರ ಪಂಬೂರು, ಸಸಿಹಿತ್ಲು ಸೇರಿದಂತೆ ವಿವಿಧ  ಬೀಚ್’ಗಳ ಮೇಲೆ ನಿಗಾ ಇರಿಸಲಾಗಿದೆ.

ಮಂಗಳೂರು : ಕೇರಳದಲ್ಲಿ ಸಮುದ್ರ ಅಲೆಗಳ ಎತ್ತರದ ಏರಿಕೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ನಿಗಾ ಇರಿಸಿದೆ. ಸೋಮೇಶ್ವರ ಪಂಬೂರು, ಸಸಿಹಿತ್ಲು ಸೇರಿದಂತೆ ವಿವಿಧ  ಬೀಚ್’ಗಳ ಮೇಲೆ ನಿಗಾ ಇರಿಸಲಾಗಿದೆ.

ಸದ್ಯ ಅಲೆಗಳ ಏರಿಳಿಕೆಯಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ ಎನ್ನಲಾಗಿದೆ.  ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಸೂಕ್ತ ನಿರ್ವಹಣೆಗೆ ಸಿದ್ಧವಾಗಿದೆ.

ಮೀನುಗಾರಿಕೆಗೆ ತೆರಳಿದ ಎಲ್ಲಾ  ಬೋಟ್’ಗಳನ್ನೂ ಕೂಡ ವಾಪಸ್ ಕರೆಸಲು ಸೂಚನೆ ನೀಡಲಾಗಿದೆ.  ಪರಿಸ್ಥಿತಿ ಸಾಮಾನ್ಯವಾಗುವವರೆಗೂ ಕೂಡ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.

loader