ಒಂದೆಡೆ ಪಕ್ಷದ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿಯು ಕೇರಳದಲ್ಲಿ ಜನರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದೆಯಾದರೆ, ಇನ್ನೊಂದೆಡೆ ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆಯೆಂದು ವರದಿಯಾಗಿದೆ.
ಕಣ್ಣೂರು, ಕೇರಳ: ಒಂದೆಡೆ ಪಕ್ಷದ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿಯು ಕೇರಳದಲ್ಲಿ ಜನರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದೆಯಾದರೆ, ಇನ್ನೊಂದೆಡೆ ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆಯೆಂದು ವರದಿಯಾಗಿದೆ.
ಪಾಲಿಕೆ ಸಿಬ್ಬಂದಿಗಳು ಬಿಜೆಪಿ ಕಾರ್ಯಾಲಯದ ಬಳಿ ಸ್ವಚ್ಛತೆ ಕಾರ್ಯ ನಡೆಸುತ್ತಿರುವಾಗ ಅವರಿಗೆ ಮಾರಾಕಾಸ್ತ್ರಗಳು ಕಣ್ಣಿಗೆ ಬಿದ್ದಿವೆ. ತಕ್ಷಣ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ಮುಟ್ಟಿಸಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಾಲಯ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಖಡ್ಗಗಳು, ಕಬ್ಬಿಣದ ರಾಡ್’ಗಳು, ಚಾಕುಗಳು ಪತ್ತೆಯಾಗಿವೆಯೆಂದು ಹೇಳಲಾಗಿದೆ.
ತನ್ನ ಕಛೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿರುವುದರ ಕುರಿತು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡುವುದಾಗಿ ಬಿಜೆಪಿ ಪದಾಧಿಕಾರಿಗಳು ಹೇಳಿದ್ದಾರೆ.
ಕೇರಳಾದ್ಯಂತ ಪಕ್ಷದ ಕಾರ್ಯಕರ್ತರ ಹತ್ಯೆಯಾಗುತ್ತಿದೆ, ಅದಕ್ಕೆ ‘ಕೆಂಪು-ಭಯೋತ್ಪಾದನೆ’ಯೇ ಕಾರಣವೆಂದು ಆರೊಪಿಸಿರುವ ಬಿಜೆಪಿಯು, ರಾಜ್ಯಾದ್ಯಂತ ‘ಜನರಕ್ಷಾ ಯಾತ್ರೆ’ಯನ್ನು ಹಮ್ಮಿಕೊಂಡಿದೆ.
ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದವರು ಕೂಡಾ ಭಾಗವಹಿಸಿದ್ದರು.
