ಬೆಂಗಳೂರು [ಜು.22] : ಇನ್ನೆರಡು ದಿನಗಳಲ್ಲಿ ನಾವೆಲ್ಲ ಬೆಂಗಳೂರಿಗೆ ಬರುತ್ತೇವೆ. ವಿಶ್ವಾಸ ಮತಯಾಚನೆಯಲ್ಲಿ ನಾವು ಭಾಗಿಯಾಗುವುದಿಲ್ಲ ಎಂದು ಅತೃಪ್ತರಾಗಿ ಮುಂಬೈನಲ್ಲಿ ನೆಲೆಸಿರುವ ಎಚ್.ವಿಶ್ವನಾಥ್ ಹೇಳಿದ್ದಾರೆ.

ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬೆಂಗಳೂರಿಗೆ ಬರುತ್ತೇವೆ. ರಾಕ್ಷಸ ರಾಜಕಾರಣದ ವಿರುದ್ಧ ನಾವೆಲ್ಲಾ ಮುಂಬೈಗೆ ಬಂದಿದ್ದೇವೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ವಂತಕ್ಕಾಗಿ ಇಡೀ ಸದನವನ್ನೇ ಬಳಸಿಕೊಳ್ಳಲಾಗುತ್ತಿದೆ. ಅನಾಯಾಸವಾಗಿ ಬಂದ ಅವಕಾಶವನ್ನು ಯಾರೋ ಮೂರ್ನಾಲ್ಕು ಜನ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ವಿಶ್ವನಾಥ್‌ ಹೇಳಿದರು.