2019 ರಲ್ಲಿ ಗೆಲುವು ನಮ್ಮದೇ: ನಮೋ

First Published 24, Mar 2018, 8:09 AM IST
We Will Win in Loksabha Election
Highlights

ತಂತ್ರಗಾರಿಕೆ ಮೂಲಕ ಚುನಾವಣೆ ಗೆಲ್ಲಬೇಕೇ ವಿನಾ ಮಾತಿನಿಂದಲ್ಲ. ಬಿಜೆಪಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, 2019ರಲ್ಲಿ ಜಯ ನಮ್ಮದೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿ (ಮಾ.24):  ತಂತ್ರಗಾರಿಕೆ ಮೂಲಕ ಚುನಾವಣೆ ಗೆಲ್ಲಬೇಕೇ ವಿನಾ ಮಾತಿನಿಂದಲ್ಲ. ಬಿಜೆಪಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, 2019ರಲ್ಲಿ ಜಯ ನಮ್ಮದೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಿಜೆಪಿ ಸಂಸದೀಯ ಪಕ್ಷದ ಸಭೆ ಉದ್ದೇಶಿಸಿ ಶುಕ್ರವಾರ ಸಂಜೆ ಮಾತನಾಡಿದ ಅವರು, ಪಕ್ಷವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಂತಾಗಲು ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಸಂಸದರು ತೆರೆದಿಡಬೇಕು ಎಂದು ಕರೆ ನೀಡಿದರು.

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಂಸದರು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳನ್ನು ತೆರೆದಿಡಬೇಕು. ಪ್ರತಿಪಕ್ಷಗಳು ಸಂಸತ್‌ ಕಲಾಪಕ್ಕೆ ಅಡ್ಡಿ ಮಾಡಿ ಕುತಂತ್ರ ನಡೆಸುತ್ತಿವೆ ಎಂಬುದನ್ನು ಜನರಲ್ಲಿ ಮದನಟ್ಟು ಮಾಡಬೇಕು. ವಿಪಕ್ಷಗಳ ಕುತಂತ್ರಗಳನ್ನು ಬಯಲು ಮಾಡಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

loader