ಬೆಂಗಳೂರು [ಆ.03]: ಮೈತ್ರಿ ಇಲ್ಲದೇ ನಾವು ಚುನಾವಣೆ ಎದುರಿಸಿದರೆ 5 ರಿಂದ 6 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಮಂಡ್ಯದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್  ಗೌಡ ಹೇಳಿದ್ದಾರೆ. 

ನಾಗಮಂಗಲದಲ್ಲಿ ಮಾತನಾಡಿದ ಸುರೇಶ್ ಗೌಡ  KR ಪೇಟೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಥಳೀ ಅಭ್ಯರ್ಥಿಗೆ ಅವಕಾಶ ನೀಡಲಾಗುವುದು ಎಂದರು. 

ಕಾಂಗ್ರೆಸ್ ತೀರ್ಮಾನದ ಮೇಲೆ ಮುಂದಿನ ಭವಿಷ್ಯ : ದೇವೇಗೌಡ

ಈಗಾಗಲೇ ಕ್ಷೇತ್ರದ ಅಭ್ಯರ್ಥಿಯಾಗಿ ನಿಖಿಲ್ ಹೆಸರು ಕೇಳಿಬರುತ್ತಿದ್ದು, ಆದರೆ ಅವರ ಸ್ಪರ್ಧೆ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿ ಚರ್ಚೆಯಾಗಿಲ್ಲ. ಕಾರ್ಯಕರ್ತರು ಅಭ್ಯರ್ಥಿ ಯಾರು ಎನ್ನುವುದನ್ನು ತೀರ್ಮಾನಿಸುತ್ತಾರೆ ಎಂದರು. 

ಇನ್ನು ಬಿ.ಎಸ್.ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ ಈಗಾಗಲೇ ದ್ವೇಷದ ರಾಜಕಾರಣ ಆರಂಭಿಸಿದ್ದಾರೆ. ಬಿಜೆಪಿಗೆ ಬಹುಮತವಿಲ್ಲ. ಅಲ್ಪ ಮತವೂ ಇಲ್ಲ. ಮತ್ತೆ ನಾವು ಅಧಿಕಾರಕ್ಕೆ ಬರುವುದು ಖಚಿತ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಸುರೇಶ್ ಗೌಡ ಭರವಸೆ ವ್ಯಕ್ತಪಡಿಸಿದಿರು. 

ಬಿಜೆಪಿ ಸಣ್ಣತನದ ರಾಜಕೀಯ ಮಾಡಲ್ಲ : ಅನಿತಾ ಕುಮಾರಸ್ವಾಮಿ

ಇನ್ನು ಕಾಂಗ್ರೆಸ್ ಹಲವು ಜಿಲ್ಲೆಗಳಿಗೆ ಉಸ್ತುವಾರಿ ನೇಮಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್ ಗೌಡ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ, ಮೈತ್ರಿ ಮುಂದುವರಿಸಬೇಕೋ, ಬೇಡವೋ ಎನ್ನುವುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.