ಪೇಜಾವರ ಶ್ರೀಗಳಿಂದ ಇಫ್ತಾರ್ ಕೂಟ ಆಯೋಜನೆ

We Will Organise Iftar Koota On June 13 Says Pejawar Sri
Highlights

ಉಡುಪಿಯಲ್ಲಿ ಜೂ.13 ರಂದು ಇಫ್ತಾರ್ ಕೂಟ ಆಯೋಜಿಸಲು ಚಿಂತಿಸಲಾಗಿದೆ ಎಂದು ಪೇಜಾವರ ಮಠದ ಪೀಠಾಧಿಪತಿ ವಿಶ್ವೇಶ ತೀರ್ಥ ಶ್ರೀಗಳು ತಿಳಿಸಿದರು. ಮಂತ್ರಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಫ್ತಾರ್  ಕೂಟ ಆಯೋಜನೆ ಬಗ್ಗೆ ಯಾವುದೇ ಮಠದ ವಿರೋಧವಿಲ್ಲ. 

ರಾಯಚೂರು: ಉಡುಪಿಯಲ್ಲಿ ಜೂ.13 ರಂದು ಇಫ್ತಾರ್ ಕೂಟ ಆಯೋಜಿಸಲು ಚಿಂತಿಸಲಾಗಿದೆ ಎಂದು ಪೇಜಾವರ ಮಠದ ಪೀಠಾಧಿಪತಿ ವಿಶ್ವೇಶ ತೀರ್ಥ ಶ್ರೀಗಳು ತಿಳಿಸಿದರು. ಮಂತ್ರಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಫ್ತಾರ್  ಕೂಟ ಆಯೋಜನೆ ಬಗ್ಗೆ ಯಾವುದೇ ಮಠದ ವಿರೋಧವಿಲ್ಲ. 

ಆದರೆ ಇಫ್ತಾರ್ ಕುರಿತು ಮುಸ್ಲಿಂ ಸಮುದಾಯದವರಲ್ಲಿ ಸಂಕೋಚ ಮನೋಭಾವನೆ ಇದ್ದು, ಈ ಕುರಿತು ಅವರ ಜೊತೆ ಚರ್ಚಿಸಲಾಗುವುದು ಎಂದರು. 

ಪ್ರಧಾನಿ ಅವರ ಆಡಳಿತ ವೈಖರಿ ಬಗ್ಗೆ ಅಸಮಾಧಾನವಿಲ್ಲ. ಆದರೆ, ಮೋದಿ ಚುನಾವಣೆ ಪೂರ್ವದಲ್ಲಿ ಕಪ್ಪು ಹಣ ತರಲಾಗುವುದು ಹಾಗೂ ಗಂಗಾ ನದಿ ಶುದ್ಧೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಎರಡೂ ಕೆಲಸಗಳನ್ನು ಮಾಡಿಲ್ಲ ಎಂದರು.

loader