ರಾಹುಲ್ ಗಾಂಧಿ ಭೇಟಿ ಕೊಡುವ ಜಿಲ್ಲೆಗಳಲ್ಲಿ ಬಂದ್ ನಡೆಸುತ್ತೇವೆ: ಬಿಎಸ್'ವೈ

First Published 24, Jan 2018, 11:57 AM IST
We Support to Karnataka Band where Rahul Gandhi Visit
Highlights

ರಾಹುಲ್  ಭೇಟಿ ಕೊಡುವ ಎಲ್ಲಾ ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್'ಗೆ ನಿರ್ಧರಿಸಲಾಗಿದೆ ಎಂದು ಮಡಿಕೇರಿಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.  

ಕೊಡಗು (ಜ.24): ರಾಹುಲ್  ಭೇಟಿ ಕೊಡುವ ಎಲ್ಲಾ ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್'ಗೆ ನಿರ್ಧರಿಸಲಾಗಿದೆ ಎಂದು ಮಡಿಕೇರಿಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.  

ರಾಹುಲ್ ರಾಜ್ಯ ಭೇಟಿ ವೇಳೆ ಅವರು ಭೇಟಿ ಕೊಡುವ ಜಿಲ್ಲಾ ವ್ಯಾಪ್ತಿಯಲ್ಲಿ ಬಂದ್'ಗೆ ಬೆಂಬಲ ನೀಡಲಾಗುತ್ತದೆ.  ಮಹದಾಯಿ ವಿಚಾರದಲ್ಲಿ ರಾಹುಲ್ ನಿಲುವು ಸ್ಪಷ್ಟಪಡಿಸಲು ಆಗ್ರಹಿಸಿ ಬಂದ್ ಮಾಡುತ್ತೇವೆ.  ಬಿಜೆಪಿಯಿಂದ ಬಂದ್ ಕರೆಗೆ ನಿರ್ಧರಿಸಲಾಗಿದೆ ಎಂದು ಬಿಎಸ್'ವೈ ಹೇಳಿದ್ದಾರೆ.  

 ಮಹದಾಯಿ ವಿಚಾರದಲ್ಲಿ ರಾಹುಲ್, ಸೋನಿಯಾ,ಸಿದ್ದರಾಮಯ್ಯ ನಿಲುವೇನು ಬಿಎಸ್ ವೈ ಪ್ರಶ್ನಿಸಿದ್ದಾರೆ.  ಮೈಸೂರಿನಲ್ಲಿ ನಮ್ಮ ಕಾರ್ಯಕ್ರಮ ವಿಫಲಗೊಳಿಸಲು ಸಿಎಂ ಯತ್ನಿಸುತ್ತಿದ್ದಾರೆ.  ನಾಳೆ ಹಾಗೂ ಫೆಬ್ರವರಿ 4 ರ ಬಂದ್ ಹಿಂದೆ ನೇರವಾಗಿ ಸಿಎಂ ಕೈವಾಡವಿದೆ ಎಂದು ಬಿಎಸ್'ವೈ ಗಂಭೀರ ಆರೋಪ ಮಾಡಿದ್ದಾರೆ. ಏನೇ ಮಾಡಿದ್ರು ಕಾರ್ಯಕ್ರಮ ನಡೆದೇ ನಡೆಯುತ್ತೆ.  ಬಿಜೆಪಿ ಯಾತ್ರೆಗೆ ತಡೆಯೊಡ್ಡಲು ಮುಂದಾಗಿರುವ ಕಾಂಗ್ರೆಸ್'ಗೆ ತಿರುಗೇಟು ಕೊಡಲು ಬಿಜೆಪಿ ಸಜ್ಜಾಗಿದೆ. ರಾಹುಲ್ ಗಾಂಧಿ ಭೇಟಿ  ವೇಳೆ ತೀವ್ರ  ಹೋರಾಟಕ್ಕೆ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಬಿಎಸ್'ವೈ ಹೇಳಿದ್ದಾರೆ.

loader