ಬೆಂಗಳೂರು [ಜು.19] : ರಾಜ್ಯ ಸರ್ಕಾರಕ್ಕೆ ವಿಶ್ವಾಸಮತ ಯಾಚನೆಗೆ ಡೆಡ್ ಲೈನ್ ನೀಡಲಾಗಿದೆ. ಇದೇ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ವಿಶ್ವಾಸದಲ್ಲಿದ್ದಾರೆ. 

ಜನತಾ ನ್ಯಾಯಾಲಯವಿದೆ. ಜೊತೆಗೆ ನಮ್ಮ ಬಳಿ ನಂಬರ್ಸ್ ಕೂಡ ಇದೆ ಎಂದಿರುವ ಸಚಿವ ಡಿಕೆ ಶಿವಕುಮಾರ್ ಸಂವಿಧಾನ ಕೊಟ್ಟ ಅವಕಾಶದಿಂದ ರಚನಾತ್ಮಕವಾಗಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಶ್ವಾಸಮತ ಯಾಚನೆ ವಿಚಾರವಾಗಿ ಯಾರಿಗೆ ಎಷ್ಟು ಹಕ್ಕಿದೆ. ಮೈತ್ರಿ ಪಾಳಯಕ್ಕೆ ಇರುವ ಅವಕಾಶಗಳೇನು, ಗವರ್ನರ್ ಗೆ ಇರುವ ಅಧಿಕಾರ ಎಷ್ಟು ಎನ್ನುವ ಸಂಬಂಧ ಇಂದು ಚರ್ಚೆ ಮಾಡುತ್ತೇವೆ ಎಂದರು. 

ಎಲ್ಲಾ ಚರ್ಚೆಯ ವಿಷಯಗಳ ಬಗ್ಗೆಯೂ ರೆಕಾರ್ಡ್ ಸಿದ್ಧಮಾಡಿಕೊಂಡಿದ್ದೇವೆ. ಎಲ್ಲಾ ಕಾನೂನು ಪುಸ್ತಕಗಳನ್ನು ಸ್ಟಡಿ ಮಾಡಿ ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.