ಬೆಂಗಳೂರು(ಸೆ.28): ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ನಿರಾಕರಣೆ ವಿಚಾರದ ಕಾಂಗ್ರೆಸ್ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
'ನಾವು ಕಾವೇರಿ ಕುರಿತ ಸರ್ವಪಕ್ಷ ಸಭೆಯಲ್ಲಿ ಭಾಗಹಿಸಿದ್ದೆವು. ಕಾಂಗ್ರೆಸ್ನವರು ಸಭೆಯ ಮಧ್ಯೆಯೇ ಮತದಾನಕ್ಕೆ ಬಂದರು ಕಾಂಗ್ರೆಸ್ನವರು ಸಭೆಯಲ್ಲಿ ಸಿಎಂ ಹೇಳಿಕೆಗೂ ಕಾಯಲಿಲ್ಲ. ನಾವು ಮಧ್ಯಾಹ್ನ 12 ಗಂಟೆಗೆ ಮತದಾನ ಮಾಡಲು ಹೋದೆವು. ಆದರೆ ವಿಳಂಬದ ಕಾರಣ ನೀಡಿ ಮತದಾನದ ಹಕ್ಕು ನೀಡಲಿಲ್ಲ. ಮೇಯರ್ ಅಷ್ಟೇ ಅಲ್ಲ ಉಪಮೇಯರ್ ಆಯ್ಕೆಗೂ ಮತದಾನದ ಹಕ್ಕು ನೀಡಲಿಲ್ಲ. ನಾವು ಹೋದಾಗ ಉಪಮೇಯರ್ ಚುನಾವಣೆ ಪ್ರಕ್ರಿಯೆಯೇ ಆರಂಭವಾಗಿರಲಿಲ್ಲ. ಹೀಗಿದ್ದರೂ ನಮಗೆ ಮತದಾನದ ಹಕ್ಕು ನಿರಾಕರಿಸಿದ್ದು ಸರಿಯಲ್ಲ ಎಂದು ಸಂಸದರು ಪ್ರತಿಕ್ರಿಯಿಸಿದ್ದಾರೆ.
ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಸಂಸದಾರದ ರಾಜೀವ್ ಚಂದ್ರಶೇಖರ್,ಪಿ.ಸಿ. ಮೋಹನ್ ವಿಳಂಬವಾಗಿ ಬಂದ ಕಾರಣ ನೀಡಿ ಮತದಾನದ ಹಕ್ಕು ನೀಡಿರಲಿಲ್ಲ. ಮತದಾನದ ಹಕ್ಕು ನೀಡದ್ದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಹೋಗಲು ಇಬ್ಬರು ಸಂಸದರು ನಿರ್ಧರಿಸಿದ್ದಾರೆ.
ಮತ ನಿರಾಕರಣೆಗೆ ಹೈಕೋರ್ಟ್'ನಲ್ಲಿ ಪ್ರಶ್ನೆ : ಸಂಸದ ರಾಜೀವ್ ಚಂದ್ರಶೇಖರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
