ನಮ್ಮ ನಂಬಿಕೆ ನಮ್ಮ ಖಾಸಗಿ ವಿಷಯ. ಈ ವಿಷಯದ ಬಗ್ಗೆ ನಾವು ಯಾರೊಬ್ಬರಿಗೂ ಪ್ರಮಾಣಪತ್ರ ನೀಡಬೇಕಾಗಿಲ್ಲ.

ವಡೋದರಾ(ಡಿ.01): ಸೋಮನಾಥ್ ದೇಗುಲ ಭೇಟಿಯ ಸಂದರ್ಭದಲ್ಲಿ ಹಿಂದೂಯೇಯರ ಧರ್ಮದ ವಿವಾದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಅಜ್ಜಿ ಹಾಗೂ ನನ್ನ ಕುಟುಂಬದವರೆಲ್ಲ ಶಿವಭಕ್ತರು. ಇಂತಹ ಸಂಗತಿಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ. ಈ ರೀತಿಯ ವಿಷಯಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಧರ್ಮ ನಮ್ಮ ಖಾಸಗಿ ವಿಷಯ' ಎಂದು ವಡೋದರದಲ್ಲಿ ವ್ಯಾಪಾರಿಗಳೊಂದಿಗೆ ನಡೆದ ಸಮಾರಂಭದಲ್ಲಿ ತಿಳಿಸಿದರು.

ನಮ್ಮ ನಂಬಿಕೆ ನಮ್ಮ ಖಾಸಗಿ ವಿಷಯ. ಈ ವಿಷಯದ ಬಗ್ಗೆ ನಾವು ಯಾರೊಬ್ಬರಿಗೂ ಪ್ರಮಾಣಪತ್ರ ನೀಡಬೇಕಾಗಿಲ್ಲ. ನಾವು ಧರ್ಮದ ದಲ್ಲಾಳಿಗಳಲ್ಲ. ಇಂತಹ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನಾವು ಇಚ್ಚಿಸುವುದಿಲ್ಲ' ಎಂದು ಹೇಳಿದರು. ಇತ್ತೀಚಿಗೆ 2 ದಿನಗಳ ಹಿಂದಷ್ಟೆ ರಾಹುಲ್ ಗಾಂಧಿ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದಾಗ ಹಿಂದುಯೇತರ ಪುಸ್ತಕದಲ್ಲಿ ಅವರ ಹೆಸರು ನಮೂದಾಗಿ ವಿವಾದವುಂಟಾಗಿತ್ತು. ಆದರೆ ರಾಹುಲ್ ಗಾಂಧಿ ನಮೂದಿಸಲಿರಲಿಲ್ಲ' ಎಂದು ಕಾಂಗ್ರೆಸ್ ಸ್ಪಷ್ಟನೆ ನಿಡಿತ್ತು. ಹಲವು ದಿನಗಳಿಂದ ರಾಹುಲ್ ಗಾಂಧಿಯವರ ಮೂಲ ಧರ್ಮದ ಬಗ್ಗೆ ಚರ್ಚೆಗಳಾಗುತ್ತಿವೆ.