ಚೆನ್ನೈ[ಜು.21]: ಕೇಂದ್ರ ಬಜೆಟ್‌ ಮಂಡನೆಯ ವೇಳೆ ಸಾಂಪ್ರದಾಯಿಕ ಸೂಟ್‌ಕೇಸ್‌ಗೆ ತಿಲಾಂಜಲಿ ನೀಡಿ, ಕೆಂಪು ಬಟ್ಟೆಯ ಬ್ಯಾಗ್‌ ತಂದ ಹಿಂದಿನ ಗುಟ್ಟನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬಿಚ್ಚಿಟ್ಟಿದ್ದಾರೆ. ಇದು ಮೋದಿ ಸರ್ಕಾರ ಸೂಟ್‌ಕೇಸ್‌ ಅನ್ನು ವಿನಿಮಯ ಮಾಡಿಕೊಳ್ಳುವುದಿಲ್ಲ ಎನ್ನುವುದರ ಸಂಕೇತ ಎಂದು ಹೇಳಿದ್ದಾರೆ.

ಬಜೆಟ್ 2019: ಬ್ರಿಟಿಷ್ ಬ್ರೀಫ್‌ಕೇಸ್‌ಗೆ ಗುಡ್ ಬೈ ಹೇಳಿದ ನಿರ್ಮಾಲಾ

ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌, ತಾವು ಬಜೆಟ್‌ ವೇಳೆ ಸೂಟ್‌ಕೇಸ್‌ ತರದೇ ಇದ್ದಿದ್ದು ದೊಡ್ಡ ಸುದ್ದಿಯಾಗಿದೆ. ಇದರಲ್ಲಿ ಸಣ್ಣ ಸಂದೇಶ ಇದೆ. ನಾನು ಸೂಟ್‌ಕೇಸ್‌ ಬಗ್ಗೆ ಯೋಚಿಸುವಾಗ ಕೆಲವು ಸಂಗತಿಗಳು ನನ್ನ ಮನಸ್ಸಿಗೆ ಬರುತ್ತವೆ. ನಮ್ಮ ಸರ್ಕಾರ ಸೂಟ್‌ಕೇಸ್‌ ವಿನಿಮಯ ಸಂಸ್ಕೃತಿಯಲ್ಲಿ ತೊಡಗುವುದಿಲ್ಲ ಎಂಬುದುನ್ನು ತೋರಿಸುವುದು ಬ್ಯಾಗ್‌ ತಂದಿದ್ದರ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.