ರವಿ ಬೆಳಗೆರೆ ಸುಪಾರಿ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ವಿಚಾರಣೆಯಲ್ಲಿ ಎರಡನೇ ಪತ್ನಿ ಯಶೋಮತಿ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಯಶೋಮತಿ ಹೇಳಿದ ಅಂಶಗಳು ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
ಬೆಂಗಳೂರು (ಡಿ.10): ರವಿ ಬೆಳಗೆರೆ ಸುಪಾರಿ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ವಿಚಾರಣೆಯಲ್ಲಿ ಎರಡನೇ ಪತ್ನಿ ಯಶೋಮತಿ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಯಶೋಮತಿ ಹೇಳಿದ ಅಂಶಗಳು ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
ಸುನೀಲ್ ಹೆಗ್ಗರವಳ್ಳಿ ನನಗೆ ಪರಿಚಯಸ್ಥರು. ಇಬ್ಬರು ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸ್ನೇಹವಿತ್ತಷ್ಟೇ. ನನ್ನ ಮತ್ತು ಸುನೀಲ್ ಹೆಗ್ಗರವಳ್ಳಿ ನಡುವೆ ಯಾವುದೇ ಕೆಟ್ಟ ಸಂಬಂಧವಿಲ್ಲ. ನಮ್ಮಿಬ್ಬರ ಸ್ನೇಹವನ್ನು ರವಿ ಬೆಳಗೆರೆಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ತಪ್ಪಾಗಿ ಅರ್ಥೈಸಿಕೊಳ್ಳುವಂಥ ಮಾಹಿತಿಯನ್ನು ರವಿ ಬೆಳಗೆರೆಗೆ ಯಾರೋ ನೀಡಿದ್ದಾರೆ. ಯಾರು ಇಂಥ ಕೆಟ್ಟ ಮಾಹಿತಿ ಕೊಟ್ಟರು ಎಂಬುದು ಗೊತ್ತಿಲ್ಲ ಎಂದು ಯಶೋಮತಿ ಹೇಳಿದ್ದಾರೆ.
ಸುನೀಲ್ ಹೆಗ್ಗರವಳ್ಳಿಗೆ ಸುಪಾರಿ ಕೊಟ್ಟಿರುವ ಬಗ್ಗೆ ನನಗೇನು ಗೊತ್ತಿಲ್ಲ. ಸುನೀಲ್ ಹೆಗ್ಗರವಳ್ಳಿಗೆ ಸುಪಾರಿ ಕೊಡುವಂಥ ಪರಿಸ್ಥಿತಿ ಯಾಕೆ ಬಂತು ಗೊತ್ತಿಲ್ಲ. ಸುಪಾರಿ ಬಗ್ಗೆ ನೀವು ರವಿಬೆಳೆಗೆರೆಯವರನ್ನೇ ಕೇಳಿ. ನನ್ನ ವೈಯುಕ್ತಿಕ ವಿಚಾರದ ಬಗ್ಗೆ ಹೆಚ್ಚಿನ ಪ್ರಸ್ತಾಪ ಮಾಡಬೇಡಿ. ಈ ಪ್ರಕರಣದ ಬಗ್ಗೆ ಏನೇನ್ ಮಾಹಿತಿ ಬೇಕೋ ಎಲ್ಲಾ ಈಗಲೇ ಕೇಳಿ. ಈ ಪ್ರಕರಣ ಸಂಬಂಧ ಪದೇ ಪದೇ ನನ್ನನ್ನ ಡಿಸ್ಟರ್ಬ್ ಮಾಡಬೇಡಿ ಪ್ಲೀಸ್ ಎಂದು ಸಿಸಿಬಿ ಪೊಲೀಸರಿಗೆ ಹೇಳಿದ್ದಾರೆ.
