ಎಲ್ಲಿ ಜನಾಭಿಪ್ರಾಯ ಇದೆ ಎಲ್ಲಿ ನೀನು ಅಭ್ಯರ್ಥಿ ಆಗಬಹುದು, ಕೆಲಸ ಮಾಡಬಹುದು ಎಂದು ಹೇಳುತ್ತೇನೆ. ಆದರೆ ಇದೇ ಫೈನಲ್ ಅಲ್ಲ. ಅಂತಿಮ ಸರ್ವೆ ನಂತರವೇ ಗೆಲ್ಲುವ ಕುದುರೆಗೆ ಟಿಕೆಟ್ ಕೊಡ್ತೀವಿ. ಯಾವುದು ಸರಿ ಇದೆಯೋ ಅದನ್ನು ಪಕ್ಷ ಮಾಡುತ್ತದೆ.
ಬೀದರ್(ಡಿ.9): ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆರಿಸಲು ಸಮೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿ ಗಳ ಆಯ್ಕೆ ಬಗ್ಗೆ ನನ್ನ ತೀರ್ಮಾನ ಅಂತಿಮ ಅಲ್ಲ. ಸಮೀಕ್ಷೆಗಳ ಫಲಿತಾಂಶ ಪ್ರಕಾರವೇ ಅಭ್ಯರ್ಥಿಗಳನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒಂದು ಸರ್ವೆ ಆಗಿದ್ದು, ಇನ್ನೂ ಎರಡು ಸರ್ವೆ ಮಾಡಿಸುತ್ತೇವೆ. ಅಂತಿಮವಾಗಿ ಮತದಾರರು ಏನು ಹೇಳುತ್ತಾರೋ ಅದೇ ಅಂತಿಮ. ಉದಾಹರಣೆಗೆ ಬೀದರ್ ಜಿಲ್ಲೆಯಲ್ಲಿ ಕೆಲವರ ಹೆಸರು ಹೇಳಿದ್ದೇನೆ. ನಾಳೆ ಸರ್ವೆಯಲ್ಲಿ ವ್ಯತ್ಯಾಸ ಆದರೆ ಟಿಕೆಟ್ ಬದಲಾಗುತ್ತದೆ. ಯಡಿಯೂರಪ್ಪ ತೀರ್ಮಾನವೇ ಅಂತಿಮವಲ್ಲ ಎಂದರು.
ಗೆಲ್ಲುವ ಕುದುರೆಗೆ ಟಿಕೆಟ್: ಎಲ್ಲಿ ಜನಾಭಿಪ್ರಾಯ ಇದೆ ಎಲ್ಲಿ ನೀನು ಅಭ್ಯರ್ಥಿ ಆಗಬಹುದು, ಕೆಲಸ ಮಾಡಬಹುದು ಎಂದು ಹೇಳುತ್ತೇನೆ. ಆದರೆ ಇದೇ ಫೈನಲ್ ಅಲ್ಲ. ಅಂತಿಮ ಸರ್ವೆ ನಂತರವೇ ಗೆಲ್ಲುವ ಕುದುರೆಗೆ ಟಿಕೆಟ್ ಕೊಡ್ತೀವಿ. ಯಾವುದು ಸರಿ ಇದೆಯೋ ಅದನ್ನು ಪಕ್ಷ ಮಾಡುತ್ತದೆ. ನಾನು ಹೇಳಿದ್ದೇ ಫೈನಲ್ ಅಲ್ಲ.
ಈಗಾಗಲೇ ಘೋಷಿತ ಅಭ್ಯರ್ಥಿಗಳನ್ನು ಕೈಬಿಡಲೂಬಹುದು ಎಂದರು. ಇನ್ನು ಈಗಾಗಲೇ ಬಂದಿರುವ ಪ್ರಥಮ ಸರ್ವೆ ವರದಿಯಾಧರಿಸಿ ಚುನಾವಣೆಗೆ ನಿಲ್ಲೋರು ಯಾರು ಎಂಬ ಸುಳಿವು ನೀಡಿದ್ದೇನೆ. ಮುಖಂಡರು ಕಾರ್ಯಕರ್ತರನ್ನು ಕರೆಸಿ ಮಾತನಾಡಿ ತಿಳಿಸಿದ್ದೇನೆ. ಮುಂದೆ ಅಭ್ಯರ್ಥಿ ಬದಲಾದರೆ ಆಗಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ಕುದುರೆಗೆ ಟಿಕೆಟ್ ಪಕ್ಕಾ ಮಾಡ್ತೇವೆ ಎಂದು ತಿಳಿಸಿದರು.
