ಚಾಮರಾಜನಗರ(ಸೆ.19): ತಮಿಳುನಾಡಿಗೆ ಮತ್ತೆ ನೀರು ಬಿಟ್ಟರೆ ನಮ್ಮ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳೂಂದಿಗೆ ಮಾತನಾಡಿದ ಸಿಎಂ ಸಿದ್ದು, ಕಾವೇರಿ ನೀರು ವಿಷಯವಾಗಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಬಲ ವಾಗಿ ವಾದ ಮಂಡನೆ ಮಾಡುತ್ತೇವೆ ಎಂದು ಖಡಕ್ ನುಡಿದ್ದಾರೆ.
ಇನ್ನು ಮೇ ತಿಂಗಳವರೆಗೂ ರಾಜ್ಯಕ್ಕೆ ಕುಡಿಯುವ ನೀರು ಬೇಕಿದೆ. ಕುಡಿಯುವ ನೀರಿನ ಅವಶ್ಯಕತೆ ಬಗ್ಗೆ ಇಂದು ಮೇಲುಸ್ತುವಾರಿ ಸಭೆಯಲ್ಲಿ ತಿಳಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.
