ವಿಜಯಪುರ(ಸೆ.27):- ವಿಜಯಪುರ ಜಿಲ್ಲೆಯಲ್ಲಿ ಜಲ ಸಂರಕ್ಷಣೆಯ ಅಭಿಯಾನ ಸಾಗಿದೆ. ಕೆರೆಗೆ ನೀರು ತುಂಬುವ ಯೋಜನೆಯ ಮೂಲಕ ಬರಗಾಲವನ್ನು ಹೊಡೆದೋಡಿಸುವ ಕಾರ್ಯಕ್ಕೆ ಸರ್ಕಾರ ಕೈ ಜೋಡಿಸಿದೆ. ಕೃಷ್ಣಾ ನದಿಯಿಂದ ನೀರನ್ನೆತ್ತಿ ಮೊದಲ ಹಂತದ ಯೋಜನೆಯಲ್ಲಿ ಆಯ್ದ ಏಳು ಕೆರೆಗಳನ್ನು ತುಂಬುವ 197 ಕೋಟಿ ರೂಪಾಯಿ ಯೋಜನೆ ಇದಾಗಿದೆ. ಸದ್ಯ ಮಮದಾಪೂರ ಎರಡು ಕೆರೆಗಳು, ಬಬಲೇಶ್ವರ ಕೆರೆ, ಸಾರವಾಡ ಗ್ರಾಮದ ಎರಡು ಕೆರೆ ಹಾಗೂ ಐತಿಹಾಸಿಕ ಬೇಗಂ ತಾಲಾಬ್ ಕೆರೆಗಳಿಗೆ ನೀರು ಹರಿಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred