ಕಲಾಂರನ್ನು ಬರ್ಖಾ, ಸರದೇಸಾಯಿ ಅವಮಾನಿಸಿದ್ದು ಹೌದಾ?

Was Dr Kalam humiliated by Journalists Barkha and Rajdeep
Highlights

ಧರ್ಮ, ರಾಜ್ಯ, ಜಾತಿ ಹಾಗೂ ರಾಜಕೀಯನ್ನು ಮೀರಿ ಸಾಧನೆ ತೋರಿದ, ಅಪಾರ ಜನ ಮೆಚ್ಚುಗೆ ಗಳಿಸಿದ ಕಲಾಂರನ್ನು ಕೆಳಗೆ ಕೂರಿಸಿ, ಚೇರ್ ಮೇಲೆ ಈ ಪತ್ರಕರ್ತರು ಮಹಾರಾಜರಂತೆ  ಕುಳಿತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆಯ ಸತ್ಯಾಸತ್ಯತೆಯನ್ನು ಅರಿಯುವ ಯತ್ನವಿದು. 

ಹೊಸದಿಲ್ಲಿ: ದೇಶದಲ್ಲಿ ಮಹಾತ್ಮ ಗಾಂಧಿಯಂಥ ಗಾಂಧಿಯನ್ನೇ ವಿರೋಧಿಸುವವರು ಸಿಗುತ್ತಾರೆ. ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್‌ರಂಧ ದೇಶ ಭಕ್ತರನ್ನೂ ಇಷ್ಟಪಡದವರಿದ್ದಾರೆ. ಆದರೆ, ಕಲಾಂನಂಥ ಸರಳ ಸ್ನೇಹಿ ಜೀವಿ, ವಿಜ್ಞಾನಿ, ರಾಷ್ಟ್ರಪತಿಯವರನ್ನು ಇಷ್ಟಪಡದವರು ಸಿಗುವುದು ವಿರಳ. ಇಂಥ ಮಹಾನ್‌ ದೇಶಭಕ್ತರನ್ನೇ ಅವಮಾನಿಸಿದ್ದರಾ ಪತ್ರಕರ್ತರಾದ ಬರ್ಖಾ ದತ್ ಹಾಗೂ ರಾಜ್‌ದೀಪ್ ಸರ್‌ದೇಸಾಯಿ?

;

ಧರ್ಮ, ರಾಜ್ಯ, ಜಾತಿ ಹಾಗೂ ರಾಜಕೀಯನ್ನು ಮೀರಿ ಸಾಧನೆ ತೋರಿದ, ಅಪಾರ ಜನ ಮೆಚ್ಚುಗೆ ಗಳಿಸಿದ ಕಲಾಂರನ್ನು ಕೆಳಗೆ ಕೂರಿಸಿ, ಚೇರ್ ಮೇಲೆ ಈ ಪತ್ರಕರ್ತರು ಮಹಾರಾಜರಂತೆ  ಕುಳಿತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆಯ ಸತ್ಯಾಸತ್ಯತೆಯನ್ನು ಅರಿಯುವ ಯತ್ನವಿದು. 

2007ರಲ್ಲಿ ನಡೆದ ರಾಮ್‌ನಾಥ್ ಗೋಯಂಕಾ ಪ್ರಶಸ್ತಿ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಕಲಾಂ ಭಾಷಣ ಮುಗಿಸಿ ವೇದಿಕೆಯಿಂದ ಇನ್ನೇನು ಹೊರಡುವವರಿದ್ದರು. ಬರ್ಖಾ ದತ್, ತಜ್ಞಾ ಸಮಿತಿಯ ಉತ್ತರವನ್ನು ಕೇಳಿಸಿಕೊಳ್ಳಲು ವಿನಂತಿಸಿದ್ದಾರೆ. 

ತಕ್ಷಣವೇ ವೇದಿಕೆಯ ಮುಂದೆ ನೆಲದ ಮುಂದೆಯೇ ಕುಳಿತ ಕಲಾಂ, ಕೇಳಿದ ಪ್ರಶ್ನೆಗೆ ಉತ್ತರಿಸಲು ಮುಂದಾದರು. ಆಗಲೇ ಎದ್ದು ನಿಂತ ಈ ಉಭಯ ಪತ್ರಕರ್ತರನ್ನು ಕುಳಿತುಕೊಳ್ಳುವಂತೆ ಖುದ್ದು ಕಲಾಂ ಸರ್ ಹೇಳಿದ್ದಾರೆಂದು ಬರ್ಖಾ ದತ್ ಹೇಳಿದ್ದಾರೆ. ಕಲಾಂ ಮಾತು ಮುಗಿಸಿದ ನಂತರ ಈ ಇಬ್ಬರೂ ಗೌರವ ಸೂಚಿಸಿದ ವೀಡಿಯೋವನ್ನು ಮತ್ತೊಂದು ವಾಹಿನಿಯೊಂದು ವರದಿ ಮಾಡಿದೆ.

ಅಲ್ಲದೇ, ಈ ಕಾರ್ಯಕ್ರಮದ ಬಗ್ಗೆ ಕಲಾಂ ವೆಬ್‌ಸೈಟ್‌ನಲ್ಲಿಯೂ ಪ್ರಸ್ತಾಪಿಸಲಾಗಿದ್ದು, ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಶ್ರಮಕ್ಕೆ ಭೇಷ್ ಎಂದು ಹೇಳಿದ್ದರು.

loader