ಹಾವೇರಿ ಜಿಲ್ಲಾಧಿಕಾರಿಗೆ ಬಂಧನ ವಾರಂಟ್

ಹಾವೇರಿ(ಸೆ.08): ಜಾತಿ ಪ್ರಮಾಣ ಪತ್ರದಲ್ಲಿ ಹೆಸರು ತಿದ್ದುಪಡಿ ಮಾಡಿಕೊಡಲು ನ್ಯಾಯಾಲಯ ಆದೇಶಿಸಿದ್ದರೂ ಕ್ರಮಕೈಗೊಳ್ಳದ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ವಿರುದ್ಧ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ನ್ಯಾಯಾಂಗ ನಿಂದನೆ ಆರೋಪದಡಿ 2ನೇ ಬಾರಿ ಬಂಧನದ ವಾರಂಟ್ ಜಾರಿ ಮಾಡಿದೆ. ಗುರುವಾರ ವಾರೆಂಟ್ ಕೈಸೇರುತ್ತಿದ್ದಂತೆ ಜಿಲ್ಲಾಧಿಕಾರಿ ಅವರು ಜಾತಿ ಪ್ರಮಾಣವನ್ನು ಪತ್ರ ತಿದ್ದುಪಡಿ ಮಾಡಿಕೊಟ್ಟಿದ್ದಾರೆ.