ಮಂಗಳವಾರ ಹಾಗೂ ಬುಧವಾರ ದೇಶಾದ್ಯಂತ ಆಚರಿಸಲ್ಪಡುವ ಮಹಾಶಿವರಾತ್ರಿ ಹಬ್ಬದ ವೇಳೆ ಶಿವ ದೇಗುಲಗಳ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಈ ಕಾರಣ, ಭದ್ರತೆ ಬಿಗಿಗೊಳಿಸಬೇಕು ಎಂದು ಗುಪ್ತಚರ ಇಲಾಖೆಯು ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ನವದೆಹಲಿ : ಮಂಗಳವಾರ ಹಾಗೂ ಬುಧವಾರ ದೇಶಾದ್ಯಂತ ಆಚರಿಸಲ್ಪಡುವ ಮಹಾಶಿವರಾತ್ರಿ ಹಬ್ಬದ ವೇಳೆ ಶಿವ ದೇಗುಲಗಳ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಈ ಕಾರಣ, ಭದ್ರತೆ ಬಿಗಿಗೊಳಿಸಬೇಕು ಎಂದು ಗುಪ್ತಚರ ಇಲಾಖೆಯು ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಭಯೋತ್ಪಾದಕರು ವಿಶೇಷವಾಗಿ ದ್ವಾದಶ ಜ್ಯೋತಿರ್ಲಿಂಗಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ನಾಸಿಕ್‌ನ ತ್ರ್ಯಂಬಕೇಶ್ವರ ದೇವಾಲಯದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಂಜಾಬ್‌, ಹರ್ಯಾಣ, ಜಮ್ಮು, ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್‌ ಹಾಗೂ ಉತ್ತರಾಖಂಡಗಳ ಶಿವ ದೇವಾಲಯಗಳಿಗೆ ಭದ್ರತೆ ಕಲ್ಪಿಸಲಾಗಿದೆ.

ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ, ಮಹಾರಾಷ್ಟ್ರದ ನಾಸಿಕ್‌ನ ತ್ರ್ಯಂಬಕೇಶ್ವರ, ಪುಣೆಯ ಭೀಮಾಶಂಕರ, ಪರಳಿಯ ವೈಜನಾಥ ಹಾಗೂ ಎಲ್ಲೋರಾದ ಘೃಷ್ಣೇಶ್ವರ, ಗುಜರಾತ್‌ನ ಸೋಮನಾಥ ಹಾಗೂ ದ್ವಾರಕಾದ ನಾಗೇಶ್ವರ, ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ಓಂಕಾರೇಶ್ವರ, ಉತ್ತರಾಖಂಡದ ಕೇದಾರನಾಥ, ಉತ್ತರಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ, ತಮಿಳುನಾಡಿನ ರಾಮೇಶ್ವರ- ಇವು ದ್ವಾದಶ ಜ್ಯೋತಿರ್ಲಿಂಗಗಳು.