ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಟ್ರೈಕ್ ಇದ್ದು ಬೌಂಡರಿ ಬಾರಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 5ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟ್ರೈಕ್ ಇದ್ದು ಬೌಂಡರಿ ಬಾರಿಸಿದರು. ನಿಯಮದ ಪ್ರಕಾರ 6ನೇ ಓವರ್ನ ಮೊದಲ ಎಸೆತದಲ್ಲಿ ಮತ್ತೊಂದು ಕ್ರೀಸ್ನಲ್ಲಿದ್ದ ಧವನ್ ಬ್ಯಾಟಿಂಗ್ಗೆ ಬರಬೇಕಿತ್ತು. ಆದರೆ ವಾರ್ನರ್ ಬ್ಯಾಟಿಂಗ್ ಮಾಡಿದ ಘಟನೆ ನಡೆದಿದೆ. ಅಂಪೈರ್ ಗೊಂದಲವೇ ಇದಕ್ಕೆಲ್ಲಾ ಕಾರಣ.
ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮ ಮತ್ತು ವೇಗದ ಬೌಲರ್ ಲಸಿತ್ ಮಲಿಂಗಾ ಐಪಿಎಲ್ 10ನೇ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಣಕ್ಕಿಳಿಯುವ ಮೂಲಕ 100ನೇ ಪಂದ್ಯವನ್ನಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಲಿಂಗಾ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ವಿಕೆಟ್ ಪಡೆದು ಸಂಭ್ರಮಿಸಿದರು.
