ಯುದ್ಧ ಸಮೀಪಿಸುತ್ತಿದೆ, ಸಿದ್ಧರಾಗಿರಿ ಎಂದು ಅಮೆರಿಕದ ನೌಕಾ ಪಡೆಯ ಕಮಾಂಡೆಂಟ್, ನಾರ್ವೆಯ ತಮ್ಮ ಸೇನಾ ತುಕಡಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್ (ಡಿ.25): ಯುದ್ಧ ಸಮೀಪಿಸುತ್ತಿದೆ, ಸಿದ್ಧರಾಗಿರಿ ಎಂದು ಅಮೆರಿಕದ ನೌಕಾ ಪಡೆಯ ಕಮಾಂಡೆಂಟ್, ನಾರ್ವೆಯ ತಮ್ಮ ಸೇನಾ ತುಕಡಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ‘ನಾನು ಹೇಳುತ್ತಿರುವುದು ಸುಳ್ಳಾಗಿರಲಿ ಎಂದು ಬಯಸುತ್ತೇನೆ. ಆದರೆ ಯುದ್ಧ ಬರುತ್ತಿದೆ.
ನೀವು ಒಂದು ಹೋರಾಟಕ್ಕಾಗಿ ಇಲ್ಲಿದ್ದೀರಿ, ಅದು ಒಂದು ಮಾಹಿತಿಯುಕ್ತ ಹೋರಾಟ, ಒಂದು ರಾಜಕೀಯ ಹೋರಾಟ’ ಎಂದು ಜನರಲ್ ರಾಬರ್ಟ್ ನೆಲ್ಲರ್ ಹೇಳಿದ್ದಾರೆ.
ಕೊರಿಯಾ ವಲಯದಲ್ಲಿ ‘ಚಂಡಮಾರುತದ ಮೋಡಕವಿಯುತ್ತಿವೆ’ ಎಂದು ವಿದೇಶಾಂಗ ಸಚಿವ ಜಿಮ್ ಮ್ಯಾಟಿಸ್ ಫೋರ್ಟ್ ಬ್ರೇಗ್‌ನಲ್ಲಿ ಹೇಳಿರುವುದಕ್ಕೆ ಮುನ್ನಾ ದಿನ, ನಾರ್ವೆಯಲ್ಲಿ ನೆಲೆಸಿರುವ ಸೇನಾ ತುಕಡಿಗಳಿಗೆ ಸೇನಾಧಿಕಾರಿಗಳು ಈ ಎಚ್ಚರಿಕೆ ಬಂದಿದೆ.
