. ಅರ್ಜಿ ನಮೂನೆ ಸಂಬಂಧಪಟ್ಟ ವಿವಿಗಳ ವೆಬ್​ಸೈಟ್​ನಲ್ಲಿ ಲಭ್ಯವಿದೆ.

ಬೆಂಗಳೂರು(ಡಿ.23): ಮೈಸೂರು ಹಾಗೂ ಬೆಂಗಳೂರು ವಿವಿ ಕುಲಪತಿ ಹುದ್ದೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಮೊದಲ ಬಾರಿಗೆ ವಾರ್ತಾ ಇಲಾಖೆ ಮೂಲಕ ಜಾಹೀರಾತು ನೀಡಿದೆ. ಅರ್ಜಿ ನಮೂನೆ ಸಂಬಂಧಪಟ್ಟ ವಿವಿಗಳ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಆಸಕ್ತರು ಜಾಹೀರಾತು ಪ್ರಕಟಗೊಂಡ 15 ದಿನದೊಳಗೆ ಅರ್ಜಿ ಸಲ್ಲಿಸತಕ್ಕದ್ದು. ಮುಂದಿನ ತಿಂಗಳು ಬೆಂಗಳೂರು ವಿವಿಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹಾಗೂ ಮೈಸೂರು ವಿವಿಯಿಂದ ಪ್ರೊ.ಕೆ.ಎಸ್. ರಂಗಪ್ಪ ಅವರು ನಿವೃತ್ತರಾಗಲಿದ್ದು, ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ.