ಕೇವಲ ಹಣವನ್ನು ಗಳಿಕೆಯ ಉದ್ದೇಶವಿಟ್ಟುಕೊಂಡಿದ್ದರೆ ಹೆಚ್ಚು ಪ್ರತಿಭೆ ಮತ್ತು ಕೌಶಲಗಳು ಅಗತ್ಯವಿರುವುದಿಲ್ಲ. ಹಣ ಗಳಿಕೆಯ ಅವಧಿಯಲ್ಲಿ ನೀವು ಉತ್ತಮ ಕೌಶಲ್ಯಗಳನ್ನು ರೂಪಿಸಿಕೊಳ್ಳದಿದ್ದರೆ ಉನ್ನತ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ.ಯಶಸ್ವಿ ಹೂಡಿಕೆದಾರರು ತಮ್ಮ ಹಣಕಾಸಿನ ಮಾರ್ಗವನ್ನು ಸುಗಮಗೊಳಿಸಬೇಕಾದರೆ ತಮ್ಮ ಉದ್ದೇಶದ  ಅಂತ್ಯದವರೆಗೂ ನಿರ್ಣಯ ಮತ್ತು ತಾಳ್ಮೆ ಹೊಂದಿರುತ್ತಾರೆ. ಯಶಸ್ಸಿಗೆ ಕಾರಣವಾಗುವ ವಿಶಿಷ್ಟ ಲಕ್ಷಣಗಳನ್ನು ನೀವು ಯಾರಲ್ಲದರೂ ಆಯ್ಕೆ ಮಾಡಿಕೊಳ್ಳಬಹುದು.

ಒಬ್ಬ ಯಶಸ್ವಿ ಹೂಡಿಕೆದಾರನಿಗೆ ಕಂಪನಿಯ ಹೂಡಿಕೆಯನ್ನು ದೃಢವಾಗಿ ಉಳಿಸಿಕೊಳ್ಳಬೇಕಾದರೆ ಉತ್ತಮ ನಿರ್ಣಯ ಹಾಗೂ ತಾಳ್ಮೆ ಇರಬೇಕು. ಹೂಡಿಕೆದಾರರಿಗೆ ಅಗತ್ಯವಾಗಿರುವ 5 ಅಂಶಗಳು.

ಯಶಸ್ವಿ ಹೂಡಿಕೆದಾರರಾಗಬೇಕಾದ 5 ಲಕ್ಷಣಗಳು ಈ ರೀತಿ ಇವೆ

ಮೊದಲು ಉಳಿಸಿ ಅನಂತರ ವೆಚ್ಚ ಮಾಡಿ

ಯಶಸ್ವಿ ಹೂಡಿಕೆದಾರರು ಮೊದಲ ತಿಂಗಳಿನಿಂದಲೇ ಉಳಿತಾಯ ಮಾಡಿ ನಂತರ ಖರ್ಚು ಮಾಡಬೇಕು. ಇದು ಬಿಟ್ಟರೆ ಇತರ ಮಾರ್ಗಗಳಿಲ್ಲ. ಉಳಿಕೆಯು ನಿಮ್ಮನ್ನು ಖರ್ಚು ಮಾಡದಂತೆ ಸಹಾಯ ಮಾಡುತ್ತದೆ. ಈ ಪ್ರಮುಖ ಹಂತವೇ ನಿಮ್ಮ ಉದ್ದೇಶ ಈಡೇರಿಕೆಗೆ ದಾರಿ ಮಾಡಿ ಕೊಡುತ್ತದೆ. ಮೊದಲ ತಿಂಗಳಿನಿಂದಲೆ ಉಳಿತಾಯ ಆರಂಭಿಸಿದರೆ ಅದು ನಂತರದ ದಿನಗಳಲ್ಲಿ ಸ್ವಯಂ ಚಾಲಿತವಾಗಿ ಉಳಿದುಕೊಂಡು ಬಿಡುತ್ತದೆ. ನಿಮ್ಮ ಮರುಕಳಿಸುವ ಠೇವಣಿ ಖಾತೆ ಅಥವಾ ಮ್ಯೂಚುಯಲ್ ಫಂಡ್ ಎಸ್'ಐಪಿ'ಗಳಿಗೆ ಪ್ರತಿ ತಿಂಗಳ ಆರಂಭದಲ್ಲಿ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಲು ನೀವು ಬ್ಯಾಂಕ್'ನ ಸೂಚನೆಯನ್ನು ಪಾಲಿಸಿಕೊಳ್ಳಿ.

ಉದ್ದೇಶಗಳಂತೆ ಹೂಡಿಕೆ ಮಾಡಿ

ಪ್ರಾಯೋಗಿಕ ಗುರಿಗಳನ್ನು ಸ್ಥಾಪಿಸಿಕೊಳ್ಳುವುದು ಹಾಗೂ ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ದೀರ್ಘಾವಧಿಯ ಪ್ರಮುಖ ಲಕ್ಷಣವಾಗಿದೆ. ಆ ಸಂಪನ್ಮೂಲಗಳನ್ನು ಸೀಮಿತಗೊಳಿಸಲಾಗಿದೆ ಎಂದು ಪರಿಗಣಿಸಿ, ನಿಮ್ಮ ಆದ್ಯತೆಗಳ ಆಧಾರದ ಮೇಲೆ ನಿಮ್ಮ ಗುರಿಗಳನ್ನು ನೀವು ಶ್ರೇಣೀಕರಿಸಬೇಕು ಹಾಗೂ ನಿಮ್ಮ ಬಂಡವಾಳ ಹಂತದ ಆಧಾರದ ಮೂಲಕ ಹೂಡಿಕೆಯ ಅಗತ್ಯತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷಣ, ಮದುವೆ ಮತ್ತು ನಿವೃತ್ತಿ ಯೋಜನೆಗಳಂತಹ ಗುರಿಗಳು ದೀರ್ಘಕಾಲದವರೆಗೆ ಮತ್ತು ಮ್ಯೂಚುಯಲ್ ಫಂಡ್'ಗಳು ಮತ್ತು ಪಿಪಿಎಫ್'ಗಳಂತಹ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ನಿಮಗೆ ಅಗತ್ಯವಿರುತ್ತದೆ. ಮತ್ತೊಂದೆಡೆ, ಕಾರನ್ನು ಖರೀದಿಸುವುದು ಅಥವಾ ರಜೆಗೆ ಹೋಗುವುದು ಮುಂತಾದ ಅಗತ್ಯತೆಗಳು ಅಲ್ಪಾವಧಿಯ ಸಣ್ಣ ಪ್ರಮಾಣದ ನಿಧಿಗಳು, ಪುನರಾವರ್ತಿತ ಠೇವಣಿಗಳ ಹೂಡಿಕೆಯನ್ನು ಅರ್ಥೈಸಬಹುದು.

ಸವಾಲುಗಳನ್ನು ಎದುರಿಸಿ

ಯಶಸ್ವಿ ಹೂಡಿಕೆದಾರ ಕಷ್ಟಗಳಿಗೆ ಭಯಪಡಬಾರದು. ಹಂತಹಂತವಾಗಿ ಲಾಭ ಪಡೆದುಕೊಳ್ಳಬೇಕಾದರೆ ಹೂಡಿಕೆಯೊಂದಿಗೆ ಬರುವ ಅಪಾಯವನ್ನು ಎದುರಿಸಲು ಸಿದ್ದರಿರಬೇಕು. ನಿಮ್ಮ ಸಂಪೂರ್ಣ ಉಳಿತಾಯವನ್ನು ಸಂಪ್ರದಾಯವಾದಿ ಆಸ್ತಿಯಲ್ಲಿರುವುದರಿಂದ ನೀವು ವೇಗವಾಗಿ ಅಭಿವೃದ್ಧಿ ಹೊಂದಲು ಅವಕಾಶ ದೊರೆಯುವುದಿಲ್ಲ. ಅಲ್ಲದೆ ಈ ರೀತಿಯ ಆಸ್ತಿಯು ಕೂಡ ನಿಮಗೆ ಹೆಚ್ಚು ಅಪಾಯ ತರುವ ಸಾಧ್ಯತೆಯಿರುತ್ತದೆ. ಬಡ್ಡಿ ದರ ಕೂಡ ಕಾಲಕಾಲಕ್ಕೆ ಏರಿಳಿತವನ್ನು ಉಂಟು ಮಾಡುತ್ತದೆ. ನೀವು ತೆಗೆದುಕೊಳ್ಳುವ ಪ್ರಬಲವಾದ ಅಪಾಯ ನಿರ್ವಹಣಾ ಯೋಜನೆಯು ನಿಮ್ಮ ಅಪಾಯವನ್ನು ತಡೆಗಟ್ಟುತ್ತದೆ.

ವೈವಿದ್ಯತೆಯ ಹೂಡಿಕೆಗಳು

ಒಂದು ಹೂಡಿಕೆಯ ಬಗ್ಗೆ ಗಮನಹರಿಸುವ ಬದಲಾಗಿ, ಅನುಭವಿ ಹೂಡಿಕೆದಾರರ ವಿವಿಧತೆಯ ಹೂಡಿಕೆಯ ಬಗ್ಗೆ ಗಮನಹರಿಸಿ. ಅವರು ಹೇಳುತ್ತಾರೆ ' ಒಂದೇ ಚೀಲದಲ್ಲಿ ನಿಮ್ಮ ಎಲ್ಲ ಮೊಟ್ಟೆಗಳನ್ನು ಹಾಕಬೇಡಿ'. ವಿವಿಧ ರೀತಿಯ ಹೂಡಿಕೆಯ ವಿಧಾನಗಳು ಅನುಕೂಲವನ್ನು ಉಂಟು ಮಾಡಬಹುದು ಅಥವಾ ವಿವಿಧ ರೀತಿಯಲ್ಲಿ ಅಪಾಯ ಒಡ್ಡುವ ಸಾಧ್ಯತೆಯಿರುತ್ತವೆ. ಈಕ್ವಿಟಿಗಳು ಉತ್ತಮ ಆದಾಯವನ್ನು ನೀಡುತ್ತಿದ್ದರೂ ಅವು ಅಪಾಯದ ಮುನ್ಸೂಚನೆ ನೀಡುವ ಸಾಧ್ಯತೆಯಿರುತ್ತದೆ. ಸಾಲದ ರೀತಿಯಲ್ಲಿರುವ ಅಗತ್ಯತೆಗಳು ಕಡಿಮೆ ತೊಂದರೆ ಹಾಗೂ ಕಡಿಮೆ ಆದಾಯವನ್ನು ತಂದುಕೊಡುತ್ತದೆ. ರಿಯಲ್ ಎಸ್ಟೇಟ್ ಹೂಡಿಕೆ ಕಡಿಮೆ ಅಪಾಯವುಳ್ಳ ಹಾಗೂ ಹೆಚ್ಚು ಆದಾಯ ತರುವ ಹೂಡಿಕೆಯಾಗಿದೆ. ಈ ಕಾರಣದಿಂದ ಒಂದು ರೀತಿಯ ಹೂಡಿಕೆಯ ಬಗ್ಗೆ ಗಮನಹರಿಸುಬ ಬದಲು ವಿವಿಧ ರೀತಿಯ ಕಡೆ ಗಮನ ಹರಿಸುವುದು ಸೂಕ್ತ. ಇದು ಅಪಾಯದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಹಿಂತೆಗೆದುಕೊಳ್ಳುವ ಪ್ರಚೋದನೆ ಕಡಿಮೆಗೊಳಿಸಿ

ಕೊನೆಯದಾಗಿ, ನಿಮ್ಮ ಹೂಡಿಕೆಯಲ್ಲಿ ತಾಳ್ಮೆ ಅಗತ್ಯ. ಯಶಸ್ವಿ ಹೂಡಿಕೆದಾರರು ಜನರಿಗೆ ಏನು ಬೇಕು ಎಂಬುದರ ಆಧಾರದ ಮೇಲೆ ಹಿಂತೆಗೆದುಕೊಳ್ಳುವಲ್ಲಿ ತೊಡಗಿಸಿಕೊಳ್ಳುತ್ತಾರೆ ಅಥವಾ ಅಲ್ಲಿ, ಇಲ್ಲಿನ ಜಾಹಿರಾತುಗಳನ್ನು ಕುರುಡಾಗಿ ಅನುಸರಿಸಿ ಹಿಂತೆಗೆದುಕೊಳ್ಳುತ್ತಾರೆ. ಮುಕ್ತಾಯಕ್ಕಿಂತ ಮೊದಲು ಹಿಂತೆಗೆದುಕೊಳ್ಳುವ ನೀತಿ ನಿಮ್ಮ ನಿರ್ದಿಷ್ಟ ಗುರಿಯನ್ನು ತಪ್ಪಿಸುತ್ತದೆ. ನಿಮ್ಮ ಗುರಿ ಈಡೇರಿಕೆಯ ಸಲುವಾಗಿ ಈ ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ದೀರ್ಘಕಾಲೀನ ಹೂಡಿಕೆಯು ನಿರಾಶಾದಾಯಕವಾಗಿದ್ದರೂ ಉತ್ತಮ ಲಾಭವನ್ನು ತಂದು ಕೊಡುತ್ತದೆ. ಈ ಕಾರಣದಿಂದ ನಿರ್ದಿಷ್ಟ ಸಮಯ ಮೀರುವುದಕ್ಕಿಂತ ಮುಂಚೆ ಹೂಡಿಕೆಯನ್ನು ಬದಲಿಸುವದನ್ನು ಬಿಟ್ಟುಬಿಡಿ.

ಆದಿಲ್ ಶೆಟ್ಟಿ, ಸಿಇಓ -ಬ್ಯಾಂಕ್ ಬಜಾರ್

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]