ವೇಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಬಗ್ಗೆ ರೈಲ್ವೆ ಮಾಡುತ್ತಿದ್ದ ತಾರತಮ್ಯವೊಂದನ್ನು ಸುಪ್ರೀಂಕೋರ್ಟ್‌ ಇತ್ತೀಚಿನ ತೀರ್ಪು ರದ್ದು ಮಾಡಿದೆ. ಹೀಗಾಗಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದವರು, ತಮ್ಮ ಹೆಸರು ವೇಟಿಂಗ್‌ ಲಿಸ್ಟ್‌ನಲ್ಲಿದ್ದರೂ, ಅವರಿಗೆ ರೈಲು ಏರುವ ಅವಕಾಶ ಕಲ್ಪಿಸಲಾಗಿದೆ.

ನವದೆಹಲಿ: ವೇಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಬಗ್ಗೆ ರೈಲ್ವೆ ಮಾಡುತ್ತಿದ್ದ ತಾರತಮ್ಯವೊಂದನ್ನು ಸುಪ್ರೀಂಕೋರ್ಟ್‌ ಇತ್ತೀಚಿನ ತೀರ್ಪು ರದ್ದು ಮಾಡಿದೆ. ಹೀಗಾಗಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದವರು, ತಮ್ಮ ಹೆಸರು ವೇಟಿಂಗ್‌ ಲಿಸ್ಟ್‌ನಲ್ಲಿದ್ದರೂ, ಅವರಿಗೆ ರೈಲು ಏರುವ ಅವಕಾಶ ಕಲ್ಪಿಸಲಾಗಿದೆ.

ಇದುವರೆಗೆ ರೈಲ್ವೆ ಕೌಂಟರ್‌ನಲ್ಲಿ ಟಿಕೆಟ್‌ ಖರೀದಿಸಿದವರು, ತಮ್ಮ ಹೆಸರು ವೇಟಿಂಗ್‌ ಲಿಸ್ಟ್‌ನಲ್ಲಿದ್ದರೂ ರೈಲು ಹತ್ತುವ ಅವಕಾಶ ಕಲ್ಪಿಸಲಾಗಿತ್ತು. ಒಂದು ವೇಳೆ ಯಾರಾದರೂ ಟಿಕೆಟ್‌ ಕಾದಿರಿಸಿದ ವ್ಯಕ್ತಿ ಪ್ರಯಾಣ ಮಾಡದೇ ಇದ್ದಲ್ಲಿ ಖಾಲಿ ಉಳಿದ ಟಿಕೆಟ್‌ ಅನ್ನು ವೇಟಿಂಗ್‌ ಲಿಸ್ಟ್‌ನಲ್ಲಿ ಇದ್ದವರಿಗೆ ನೀಡಲಾಗುತ್ತಿತ್ತು. ಆದರೆ ಆನ್‌ಲೈನ್‌ನಲ್ಲಿ ಖರೀದಿಸಿದವರಿಗೆ ಈ ರೀತಿ ರೈಲು ಹತ್ತುವ ಅವಕಾಶವೇ ಇರಲಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯೊಂದನ್ನು ಇತ್ತೀಚೆಗೆ ಇತ್ಯರ್ಥಪಡಿಸಿರುವ ಸುಪ್ರೀಂಕೋರ್ಟ್‌, ಇಂಥವರಿಗೂ ರೈಲು ಹತ್ತಲು ಅವಕಾಶ ಮಾಡಿಕೊಡಬೇಕು ಎಂದು ಸ್ಪಷ್ಟಪಡಿಸಿದೆ.

ರೈಲಿನಲ್ಲಿ ಆರ್‌ಎಸಿ (ರಿಸರ್ವೇಷನ್‌ ಅಗೈನೆಸ್ಟ್‌ ಕ್ಯಾನ್ಸಲೇಷನ್‌) ಇದ್ದವರಿಗೆ ಕನಿಷ್ಠ ಕುಳಿತು ಕೊಳ್ಳುವ ಸೀಟಿನ ಖಚಿತತೆ ಇರುತ್ತದೆ. ಆದರೆ ವೇಟಿಂಗ್‌ ಲಿಸ್ಟ್‌ನಲ್ಲಿ ಇದ್ದವರಿಗೆ ಈ ರೀತಿ ಯಾವುದೇ ಖಚಿತತೆ ಇರುವುದಿಲ್ಲ. ಯಾವುದೇ ಪ್ರಯಾಣಿಕ ಬರದೇ ಇದ್ದಲ್ಲಿ ಮಾತ್ರವೇ ಅವರಿಗೆ ಟಿಕೆಟ್‌ ನೀಡಲಾಗುತ್ತದೆ.