ಈ ಟೌನ್'ಶಿಪ್'ನಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷರಿಗೆ ವಿಸ್ತಾರವಾದ ಬಂಗಲೆಯನ್ನು ನಿರ್ಮಿಸಲಾಗುತ್ತದೆ.

ಬೆಂಗಳೂರು(ನ.23): ವಿವಿಐಪಿಗಳಿಗಾಗಿ ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿ ವಿವಾದಕ್ಕೀಡಾಗಿರುವ ರಾಜ್ಯ ಸರ್ಕಾರ ಈಗ ಶ್ರೀಮಂತರಿಗಾಗಿಯೇ ಲಕ್ಷುರಿ ಬಡಾವಣೆಯನ್ನು ನಿರ್ಮಿಸಲು ಹೊರಟು ಮತ್ತೊಂದು ದೊಡ್ಡ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ.

ಈ ಶ್ರೀಮಂತರು ಮತ್ತಿನ್ಯಾರು ಅಲ್ಲ ನಮ್ಮ ನಾಡಿನ 225 ಎಂಎಲ್'ಎಗಳು ಹಾಗೂ 75 ಎಂಎಲ್ಸಿಗಳು ಜೊತೆಗೆ ಇವರ ಜೊತೆಗೆ ಕೆಲಸ ಮಾಡುವ ಉನ್ನತ ಸ್ತರದ ಅಧಿಕಾರಿಗಳು. ಈ ಮಹನೀಯರಿಗಾಗಿ ವೈಟ್'ಫೀಲ್ಡ್ ಬಳಿ 100 ಎಕರೆ ಪ್ರದೇಶದಲ್ಲಿ 'ಲೆಜಿಸ್ಲೇಜರ್ ಟೌನ್'ಶಿಪ್' ನಿರ್ಮಿಸುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಈ ಟೌನ್'ಶಿಪ್'ನಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷರಿಗೆ ವಿಸ್ತಾರವಾದ ಬಂಗಲೆಯನ್ನು ನಿರ್ಮಿಸಲಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳಾದ ಕ್ಲಬ್ ಹೌಸ್, ಸಮುದಾಯ ಭವನ,ಮನರಂಜನಾ ಕೇಂದ್ರಗಳು ಹಾಗೂ ಆಟದ ಮೈದಾನ ಸೇರಿದಂತೆ ಹಲವು ಸೌಲಭ್ಯಗಳು ಒಳಗೊಂಡಿರುತ್ತವೆ.

ಈಗ ಸದ್ಯದ ಪ್ರಶ್ನೆಯೇನಂದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಮತ್ತೆ ಇನ್ನೊಂದು ಲಕ್ಷುರಿ ಯೋಜನೆ ನಿರ್ಮಿಸಬೇಕ್ಕೆನ್ನುವುದು. ತೆರಿಗೆ ಹಣವನ್ನು ಸಾರ್ವಜನಿಕರ ಸದ್ವಿನಿಯೋಗಕ್ಕೆ ಬಳಸದೆ ಶ್ರೀಮಂತರ ಒಡಲಿಗೆ ಹಾಕುವುದು ಎಷ್ಟು ಸರಿ.