ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದ ಉರುಳು ವಿಐಪಿಗಳನ್ನು ಮಾತ್ರವಲ್ಲ ಕೆಲ ಪತ್ರಕರ್ತರ ಕೊರಳಿಗೂ ಸುತ್ತಿಕೊಂಡಿದೆ. ಆಗಸ್ಟಾ ವೆಸ್ಟ್ ಲ್ಯಾಂಡ್ ಪರವಾಗಿ ವರದಿ ಮಾಡಿದ ಕೆಲ ಪತ್ರಕರ್ತರ ವಿರುದ್ದ ವಿಶೇಷ ತನಿಖಾ ತಂಡ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ನವದೆಹಲಿ (ಜ.03): ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದ ಉರುಳು ವಿಐಪಿಗಳನ್ನು ಮಾತ್ರವಲ್ಲ ಕೆಲ ಪತ್ರಕರ್ತರ ಕೊರಳಿಗೂ ಸುತ್ತಿಕೊಂಡಿದೆ. ಆಗಸ್ಟಾ ವೆಸ್ಟ್ ಲ್ಯಾಂಡ್ ಪರವಾಗಿ ವರದಿ ಮಾಡಿದ ಕೆಲ ಪತ್ರಕರ್ತರ ವಿರುದ್ದ ವಿಶೇಷ ತನಿಖಾ ತಂಡ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಆಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದದ ಪರವಾಗಿ ಬರೆಯಲು ಪತ್ರಕರ್ತರು 50 ಕೋಟಿ ಹಣವನ್ನು ಪಡೆದಿದ್ದರು ಎನ್ನುವ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯಿಂದ ಪ್ರತಿಕ್ರಿಯೆ ಕೇಳಿದೆ.
ನ್ಯಾ.ದೀಪಕ್ ಮಿಶ್ರಾ ಮತ್ತು ಅರುಣ್ ಮಿಶ್ರಾ ನ್ಯಾಯಪೀಠ ಪತ್ರಕರ್ತರ ವಿರುದ್ದ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿದೆ. ಈ ಹಗರಣದಲ್ಲಿ ಮಾಧ್ಯಮದ ಪಾತ್ರವಿದೆಯಾ ಇಲ್ಲವಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವರದಿ ನೀಡುವಂತೆ ಕೇಳಿದೆ.
