ಗುಪ್ತ ನೀತಿ ಮರಿಬೇಡಿ: ಬೀದರ್‌ನಲ್ಲಿ ಮತದಾನದ ಸೆಲ್ಫಿ ಟ್ರೆಂಡ್ ಭೀತಿ!
ಸಾಮಾಜಿಕ ಜಾಲತಾಣದಲ್ಲಿ ಮತದಾನ ಬಹಿರಂಗಪಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೀದರ್ ನಲ್ಲಿ ಮತದಾನ ಮಾಡುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಂಡ ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೆಲ್ಫಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದು ಈಗ ಟ್ರೆಂಡ್ ಮಾಡಿಕೊಂಡಿದ್ದಾರೆ.

ಇನ್ನೂ ಕೆಲ ಕಾರ್ಯಕರ್ತರು ಕಾಂಗ್ರೆಸ್ ಗೆ ಓಟ್ ಮಾಡುತ್ತಿರುವಂತೆ ಮಾಡಿ ಬಿಜೆಪಿಗೆ ಮತದಾನ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹಿಯಾಳಿಸುವ ರೀತಿಯಲ್ಲಿ ಓಟ್ ಮಾಡಿರುವ ಸೆಲ್ಫಿ ವಿಡಿಯೋ ಕೂಡ ವೈರಲ್ ಮಾಡಿದ್ದಾರೆ. ಇಂತಹ ಸಾಕಷ್ಟು ಪೋಸ್ಟ್ ಗಳು ಮತ ಬಹಿರಂಗಪಡಿಸಿಕೊಂಡ ವಿಡಿಯೋ ಫೋಟೊಗಳು ಹರಿದಾಡುತ್ತಿವೆ.
ಮತದಾನ ಬಹಿರಂಗಪಡಿಸುವುದು ಕಾನೂನು ಬಾಹಿರ ಆದರೂ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತದಾನದ ಸಂದರ್ಭದಲ್ಲಿ ಹಲವು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ ಬಹಿರಂಗ ಮಾಡುವುದು ಟ್ರೆಂಡ್ ಮಾಡಿಕೊಂಡು ಬಿಟ್ಟಿದ್ದಾರೆ. ಜೊತೆಗೆ ನಮ್ಮ ನಾಯಕ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದರೆ ಇನ್ನೊಂದಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗೆಲುವು ಗ್ಯಾರಂಟಿ ಎಂಬ ವಾದ-ಪ್ರತಿವಾದಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.