ಕುಮಾರಸ್ವಾಮಿ ಅನುಮತಿ ಪಡೆದೇ ಕಾಂಗ್ರೆಸ್'ಗೆ ಮತ ಹಾಕಿದ್ದೇನೆ, ನಾನು ಪಕ್ಷ ಬಿಟ್ಟು ಹೋಗಲ್ಲ ಹೋದರೆ ತಾಯಿಗೆ ದ್ರೋಹ ಮಾಡಿದಂತಾಗುತ್ತೆ ಎಂದು ಜೆಡಿಎಸ್'ನಿಂದ ಅಮಾನತುಗೊಂಡ ಶಾಸಕ ಜಮೀರ್ ಅಹಮದ್ ಹೇಳಿದ ಮಾತಿದು.
ನನ್ನನ್ನು ಕಾಂಗ್ರೆಸ್'ನಲ್ಲಿ ಗುರುತಿಸಲಿಲ್ಲ, ಜೆಡಿಎಸ್ ಎಲ್ಲವೂ ಕೊಟ್ಟಿದೆ. ಪಕ್ಷ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರದ್ದು. ಅವರು ಹೊರ ಕಳುಹಿಸುವವರೆಗೂ ಬಿಟ್ಟು ಹೋಗಲ್ಲ. ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ತಟಸ್ಥರಾಗಿರಲು ತೀರ್ಮಾನ ಮಾಡಿದ್ದೆವು. ಆದರೆ ಬಿಜೆಪಿಗೆ ಅನುಕೂಲ ಆಗೋದು ಬೇಡ ಅಂತಾ ದೇವೇಗೌಡ'ರಿಗೆ ಮನವಿ ಮಾಡುತ್ತೇನೆ. ನನ್ನ ಸಮಾಜಕ್ಕೆ ಮೋಸ ಮಾಡೋದು ಬೇಡ. ಮುಸ್ಲಿಂ ಸಮಾಜ ಗೌಡರ ಮೇಲೆ ಅಪಾರ ನಂಬಿಕೆ ಇಟ್ಟಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್'ನಿಂದ ನಂಬಿಕೆ ದ್ರೋಹ
ರಾಜ್ಯಸಭಾ ಚುನಾವಣೆಯಲ್ಲಿ ತಪ್ಪಾಗಿದೆ ನಿಜ. ಕುಮಾರಸ್ವಾಮಿ ಅನುಮತಿ ಪಡೆದೇ ಕಾಂಗ್ರೆಸ್'ಗೆ ಮತ ಹಾಕಿದ್ದೇನೆ. ದೇವೇಗೌಡ, ಕುಮಾರಸ್ವಾಮಿ ನಮ್ಮ ನಾಯಕರು. ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಅಂಥ ಹೆಸರಿಡಬೇಕಿತ್ತು. ಆದರೆ ಹಜ್ ಭವನ ಅಂಥ ಕಾಂಗ್ರೆಸ್ ಸರ್ಕಾರ ನಾಮಕರಣ ಮಾಡಿದೆ. ಇದು ನಂಬಿಕೆ ದ್ರೋಹದ ಕೆಲಸ. ನಮ್ಮ ಸಮಾಜದ ಮುಖಂಡರು ನನ್ನ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಸಿಎಂ ಆಗಿ 3 ತಿಂಗಳಲ್ಲೇ ಹಜ್ ಭವನ್'ಗೆ ಟಿಪ್ಪು ಸುಲ್ತಾನ್ ಭವನ ಅಂತ ನಾವು ಮರುನಾಮಕರಣ ಮಾಡುತ್ತೇವೆ ಎಂದು ತಿಳಿಸಿದರು.
