. ಆದರೆ ವಜಾಗೊಂಡಿರುವ ಅಪ್ಪಾಜಿ ಗೌಡ ನೇತೃತ್ವದಲ್ಲಿ ಅಪ್ಪಾಜಿಗೌಡ, ಮಹದೇವ್, ಪ್ರಸನ್ನ, ವೆಂಕಟೇಶ್, ಶಿವಣ್ಣ, ಮುನೇಗೌಡ, ಉಲ್ಲೂರು ಮಂಜು, ನಾಗರಾಜು, ಕಾಡೇಗೌಡ ಮುಂತಾದವರು ಭಾಗಿಯಾಗಿ ಸಂಘದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ.

ಬೆಂಗಳೂರು(ಫೆ.13): ಒಕ್ಕಲಿಗರ ಸಂಘದ ಕುರ್ಚಿ ಜಗಳ ಮತ್ತೆ ಮುಂದುವರಿದಿದೆ. ಸಂಘದ ಘನತೆಗೆ ಚ್ಯತಿ ತರಬೇಡವೆಂದರೂ ಸಂಘದ ನಿರ್ದೇಶಕರು ಮಾತ್ರ ಕುರ್ಚಿಗಾಗಿ ಕಿತ್ತಾಡುವುದನ್ನು ಬಿಡುತ್ತಿಲ್ಲ. ಇತ್ತೀಚಿಗಷ್ಟೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಂಘದಲ್ಲಿ ಯಾವುದೇ ಸಭೆ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಆದರೆ ವಜಾಗೊಂಡಿರುವ ಅಪ್ಪಾಜಿ ಗೌಡ ನೇತೃತ್ವದಲ್ಲಿ ಅಪ್ಪಾಜಿಗೌಡ, ಮಹದೇವ್, ಪ್ರಸನ್ನ, ವೆಂಕಟೇಶ್, ಶಿವಣ್ಣ, ಮುನೇಗೌಡ, ಉಲ್ಲೂರು ಮಂಜು, ನಾಗರಾಜು, ಕಾಡೇಗೌಡ ಮುಂತಾದವರು ಭಾಗಿಯಾಗಿ ಸಂಘದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಬೆಟ್ಟೆಗೌಡ ಅವರನ್ನು ವಜಾಮಾಡಿ ಮುಂದಿನ ಅಧ್ಯಕ್ಷ ಚುನಾವಣೆ ಘೋಷಣೆ ಸಾದ್ಯತೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred