ನ್ಯಾಯ ಎನ್ನುವುದು ನಮ್ಮ ದೇಶದಲ್ಲಿ ಕೆಲವರಿಗೆ ಕನಸಾಗಿರುವುದಕ್ಕೆ ಕಳವಳ ವ್ಯಕ್ತಪಡಿಸುತ್ತಾ, ದುರ್ಬಲ ವರ್ಗದವರಿಗೆ ಹಾಗೂ ಕೆಳವರ್ಗದವರಿಗೆ ಕಾನೂನಿನ ನೆರವು ಮತ್ತು ಸೇವೆ ಒದಗಿಸುವಲ್ಲಿ ನಿರಾಕರಿಸಬಾರದೆಂದು ಮುಖ್ಯ ನ್ಯಾ. ಖೇಹರ್ ಹೇಳಿದರು.
ನವದೆಹಲಿ (ಮಾ.18): ನ್ಯಾಯ ಎನ್ನುವುದು ನಮ್ಮ ದೇಶದಲ್ಲಿ ಕೆಲವರಿಗೆ ಕನಸಾಗಿರುವುದಕ್ಕೆ ಕಳವಳ ವ್ಯಕ್ತಪಡಿಸುತ್ತಾ, ದುರ್ಬಲ ವರ್ಗದವರಿಗೆ ಹಾಗೂ ಕೆಳವರ್ಗದವರಿಗೆ ಕಾನೂನಿನ ನೆರವು ಮತ್ತು ಸೇವೆ ಒದಗಿಸುವಲ್ಲಿ ನಿರಾಕರಿಸಬಾರದೆಂದು ಮುಖ್ಯ ನ್ಯಾ. ಖೇಹರ್ ಹೇಳಿದರು.
ಯಾವೊಬ್ಬ ಆರೋಪಿಯು ವಾದಿಸದೇ ಇರಬಾರದು, ಅಗತ್ಯ ಬಿದ್ದಾಗ ಪ್ರತಿಯೊಬ್ಬರಿಗೂ ಕಾನೂನಿನ ನೆರವು ನೀಡಬೇಕು. ಆದಷ್ಟು ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಖೇಹರ್ ಹೇಳಿದ್ದಾರೆ.
