ಮಾಸ್ಕೋ(ಮೇ.29): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಹಸ್ಯ ಪ್ರೇಯಸಿ, ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಅಲೈನಾ ಕಬಾಯೇನಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದೆ. 

36 ವರ್ಷದ ಅಲೈನಾ ಕಬಾಯೋನಾ ಹಾಗೂ ಪುಟಿನ್ ನಡುವೆ ಸಂಬಂಧ ಇದ್ದು, ಪರಿಣಾಮ ಅಲೈನಾ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ರಷ್ಯಾ ಗುಪ್ತಚರ ಆಸ್ಪತ್ರೆಯಲ್ಲಿ ಕಬಾಯೋನಾ ಇಟಲಿ ವೈದ್ಯರ ನೆರವಿನಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.

2013ರಲ್ಲಿ ಪುಟಿನ್ ತಮ್ಮ ಪತ್ನಿ ಲೈಡ್ಮಿಲಾ ಶಕ್ರೆಬ್ನೆವಾ ಅವರ ಜೊತೆಗಿನ 30 ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದರು. ಬಳಿಕ 2014ರಲ್ಲಿ ಅಲೈನಾ ಜೊತೆ ಪುಟಿನ್ ಅವರಿಗೆ ಪ್ರೇಮಾಂಕುರವಾಗಿತ್ತು.