ಗುತ್ತಿಗೆ ಮತ್ತು ಕಾಯಂ ನೌಕರರು ಸೇರಿ ಎಲ್ಲ ನೌಕರರು ಭದ್ರಾವತಿ, ದುರ್ಗಾಪುರ ಹಾಗೂ ಸೇಲಂ ಉಕ್ಕು ಕಾರ್ಖಾನೆಯಲ್ಲಿ 1 ದಿನದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಈ ಘಟಕಗಳಲ್ಲಿ ಕೆಲಸ ಸ್ತಬ್ಧವಾಗಿತ್ತು ಎಂದು ಸಿಐಟಿಯು ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ತಿಳಿಸಿದ್ದಾರೆ.
ನವದೆಹಲಿ(ಏ.11): ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸೇರಿ ದೇಶದ 3 ಸರ್ಕಾರಿ ಸ್ವಾಮ್ಯದ ಉಕ್ಕು ಕಾರ್ಖಾನೆಯಲ್ಲಿನ ಬಂಡವಾಳ ಹಿಂತೆಗೆತ ಪ್ರಕ್ರಿಯೆ ವಿರೋಸಿ ಮಂಗಳವಾರ ನೌಕರರು ಒಂದು ದಿನದ ಮುಷ್ಕರ ನಡೆಸಿದರು.
ಗುತ್ತಿಗೆ ಮತ್ತು ಕಾಯಂ ನೌಕರರು ಸೇರಿ ಎಲ್ಲ ನೌಕರರು ಭದ್ರಾವತಿ, ದುರ್ಗಾಪುರ ಹಾಗೂ ಸೇಲಂ ಉಕ್ಕು ಕಾರ್ಖಾನೆಯಲ್ಲಿ 1 ದಿನದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಈ ಘಟಕಗಳಲ್ಲಿ ಕೆಲಸ ಸ್ತಬ್ಧವಾಗಿತ್ತು ಎಂದು ಸಿಐಟಿಯು ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ತಿಳಿಸಿದ್ದಾರೆ.
ಭದ್ರಾವತಿ ಕಾರ್ಖಾನೆಯಲ್ಲಿ ಕಬ್ಬಿಣದ ಅದಿರು ಕೊರತೆ ಕಾರಣ ಈಗಾಗಲೇ 1 ವಾರದಿಂದ ಕೆಲಸ ನಿಂತಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಉಕ್ಕು ಪ್ರಾಕಾರದ ಅಕಾರಿಯೊಬ್ಬರ ಪ್ರಕಾರ ಹಾಜರಾತಿ ಪ್ರಮಾಣ ಮೂರೂ ಕಾರ್ಖಾನೆಗಳಲ್ಲಿ ಶೇ.50ರಷ್ಟಿತ್ತು.