ಮಾನ್ಸೂನ್ ಗೆ ವಿಸ್ತಾರದಲ್ಲಿ ಕನಿಷ್ಟ ದರ...?

First Published 10, Jun 2018, 1:05 PM IST
Vistara Early Monsoon Sale
Highlights

ಟಾಟಾ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಒಡೆತನದಲ್ಲಿರುವ ವಿಸ್ತಾರ ಏರ್‌ಲೈನ್ಸ್ ದೇಶದ 22 ಜಾಗಗಳಲ್ಲಿ ಸಂಚರಿಸುತ್ತಿದೆ. ಈ ವರ್ಷಾಂತ್ಯದೊಳಗೆ ಡೊಮೆಸ್ಟಿಕ್ ಹಾರಾಟವನ್ನು ಇನ್ನಷ್ಟು ವಿಸ್ತರಿಸುವ ಚಿಂತನೆಯಲ್ಲಿದೆ.

ಬೆಂಗಳೂರು :  ಎಲ್ಲೆಲ್ಲೂ ಮಾನ್ಸೂನ್ ಆಫರ್‌ಗಳು. ವಿಮಾನಯಾನ ಸಂಸ್ಥೆಗಳೂ ಪ್ರಯಾಣದರದಲ್ಲಿ ಆಫರ್ ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮೂಲಕ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಬಡವನ ಕನಸು ನನಸಾಗುವುದರಲ್ಲಿದೆ.

ಟಾಟಾ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಒಡೆತನದಲ್ಲಿರುವ ವಿಸ್ತಾರ ಏರ್‌ಲೈನ್ಸ್ ದೇಶದ 22 ಜಾಗಗಳಲ್ಲಿ ಸಂಚರಿಸುತ್ತಿದೆ. ಈ ವರ್ಷಾಂತ್ಯದೊಳಗೆ ಡೊಮೆಸ್ಟಿಕ್ ಹಾರಾಟವನ್ನು ಇನ್ನಷ್ಟು ವಿಸ್ತರಿಸುವ ಚಿಂತನೆಯಲ್ಲಿದೆ. ವಿಸ್ತಾರ ಸಂಸ್ಥೆಯ ವಿಮಾನಗಳು ಬೆಂಗಳೂರಿನಿಂದ ಗೋವಾ, ದೆಹಲಿ, ರಾಂಚಿ ಮೊದಲಾದೆಡೆ ಈ ವಿಮಾನಗಳು ಸಂಚರಿಸುತ್ತವೆ. ಆದರೆ ಬೆಂಗಳೂರಿನಿಂದ  ಹೊರಡುವ ವಿಮಾನಗಳಿಗೆ ಈ ಮುಂಗಾರು ಆಫರ್ ಅನ್ವಯವಾಗುವುದಿಲ್ಲ. 

ದೆಹಲಿಯಿಂದ ಬೆಂಗಳೂರು, ಲಕ್ನೋ, ಚಂಡೀಘರ್, ಅಮೃತಸರ, ಗೋವಾ, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಜಮ್ಮುವಿನಿಂದ ಶ್ರೀನಗರ, ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುವ ವಿಮಾನಗಳಲ್ಲಿ ಎಲ್ಲ ದರ್ಜೆಗಳಿಗೂ ಈ ಮಾನ್ಸೂನ್ ರಿಯಾಯಿತಿ ಅನ್ವಯಿಸಲಿದೆ. ಹೋಗುವ ಹಾಗೂ ಬರುವ ಪ್ರಯಾಣಗಳೆರಡಕ್ಕೂ ಅನ್ವಯಿಸಲಿದೆ. ವಿಸ್ತಾರ ತನ್ನ ವಿಮಾನಯಾನದ ಕನಿಷ್ಠ ಪ್ರಯಾಣ ದರವನ್ನು 1599  ರು.,ನಿಗದಿ ಮಾಡಿದೆ. ಕೆಲವೇ ಗಂಟೆಗಳಲ್ಲಿ ಈ ಆಫರ್ ಮುಕ್ತಾಯವಾಯ್ತು.

ವಿಸ್ತಾರದ ತಾಂತ್ರಿಕ ನಿರ್ವಹಣೆಯ ಬಗ್ಗೆ ಹಿಂದೆಯೇ ಅಪಸ್ವರಗಳೆದ್ದಿವೆ. ಕೆಲವು ದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನ ತಾಂತ್ರಿಕ ಸಮಸ್ಯೆಯಿಂದ ಟೇಕಾಫ್ ಆಗದೇ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ವಿಸ್ತಾರದ ಹಿನ್ನಡೆಗೆ ಇದೂ ಒಂದು ಕಾರಣ. ಆದರೆ ಇದೀಗ ಹೊಸ ಹೊಸ ಆಫರ್‌ಗಳನ್ನು ನೀಡುವ ಮೂಲಕ ಪ್ರಯಾಣಿಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನದಲ್ಲಿದೆ ವಿಸ್ತಾರ. 

loader