ವಿಶ್ವನಾಥ್ ರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ನಿರಾಕರಣೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 8:12 AM IST
ViShwanath May Reject JDS President Post
Highlights

ಈಗಾಗಲೇ  ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಬಹುತೇಕ ಖಚಿತ ಎನ್ನುವಂತೆ ಆಗಿದ್ದ ಎಚ್. ವಿಶ್ವನಾಥ್ ಅವರು ಇದೀಗ ರಾಜ್ಯಾಧ್ಯಕ್ಷ ಹುದ್ದೆಯನ್ನು ನಿರಾಕರಣೆ ಮಾಡುವ ಸಾಧ್ಯತೆ ಇದೆ. ವಯಸ್ಸಾದ ಕಾರಣದಿಂದ ಜವಾಬ್ದಾರಿ ವಹಿಸಿಕೊಳ್ಳುವುದು ಅನುಮಾನವಾಗಿ.

ಬೆಂಗಳೂರು: ಹಿರಿಯ ರಾಜಕಾರಣಿ ಹಾಗೂ ಪಕ್ಷದ ಶಾಸಕ ಎಚ್.ವಿಶ್ವನಾಥ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಜವಾಬ್ದಾರಿ ನೀಡಲು ಪಕ್ಷದ ವರಿಷ್ಠರು ಒಲವು ಹೊಂದಿದ್ದರೂ ಖುದ್ದು ವಿಶ್ವನಾಥ್ ಅವರು ಒಪ್ಪುವ ಬಗ್ಗೆ ಅನುಮಾನ ವಿದೆ. ರಾಜ್ಯಾಧ್ಯಕ್ಷರಾಗಿ ಹೊಣೆ ಹೊತ್ತುಕೊಂಡಲ್ಲಿ ಇಡೀ ರಾಜ್ಯ ಸುತ್ತಿ ಪಕ್ಷ ಸಂಘಟಿಸಬೇಕಾದಷ್ಟು ಆರೋಗ್ಯ ಸಂಪತ್ತು ತಮಗೆ ಇಲ್ಲ ಎಂಬ ಅಸಹಾಯಕತೆಯನ್ನು ವಿಶ್ವನಾಥ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಮೊನ್ನೆ ನಡೆದ ಜೆಡಿಎಸ್ ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕ್ತಿಗೊಳಿಸಲು ಗಂಭೀರ ಚಿಂತನೆ ನಡೆದಿತ್ತು ಹಿರಿಯ ರಾಜಕಾರಣಿ ಹಾಗೂ ಪಕ್ಷದ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಜವಾಬ್ದಾರಿ ನೀಡಲು ಪಕ್ಷದ ವರಿಷ್ಠರು ಒಲವು ಹೊಂದಿದ್ದರೂ ಖುದ್ದು ವಿಶ್ವನಾಥ್ ಅವರು ಒಪ್ಪುವ ಬಗ್ಗೆ ಅನುಮಾನವಿದೆ.

ರಾಜ್ಯಾಧ್ಯಕ್ಷರಾಗಿ ಹೊಣೆ ಹೊತ್ತುಕೊಂಡಲ್ಲಿ ಇಡೀ ರಾಜ್ಯವನ್ನು ಸುತ್ತಿ ಪಕ್ಷ ಸಂಘಟಿಸಬೇಕಾದಷ್ಟು ಆರೋಗ್ಯ ಸಂಪತ್ತು ತಮಗೆ ಇಲ್ಲ ಎಂಬ ಅಸಹಾಯಕತೆಯನ್ನು ವಿಶ್ವನಾಥ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಂಬರುವ ಲೋಕಸಭಾ ಚುನಾವಣೆ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಇತರೆ ಹಿಂದುಳಿದ ವರ್ಗದ ನಾಯಕರೊಬ್ಬರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಉದ್ದೇಶ ಹೊಂದಿರುವ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಹಾಲಿ ರಾಜ್ಯಾಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ಆಯ್ಕೆ ಯಾಗಿ ವಿಶ್ವನಾಥ್ ಅವರ ಹೆಸರನ್ನು ಮುಂದಿರಿಸಿ ಕೊಂಡಿದ್ದಾರೆ. ಈ ಬಗ್ಗೆ ಇದುವರೆಗೆ  ದೇವೇ ಗೌಡರಾಗಲಿ ಅಥವಾ ಕುಮಾರಸ್ವಾಮಿ ಅವರಾಗಲಿ ವಿಶ್ವನಾಥ್ ಬಳಿ ಅಧಿಕೃತವಾಗಿ ಮಾತುಕತೆ ನಡೆಸದೇ ಇದ್ದರೂ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಒಲವು ಹೊಂದಿದ್ದಾರೆ. 

ಆದರೆ, ಮಾಧ್ಯಮಗಳಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಬಳಿಕ ಆಪ್ತರೊಂದಿಗೆ ಸಮಾಲೋಚನೆ ನಡೆಸಿರುವ ವಿಶ್ವನಾಥ್ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಪಕ್ಷದ ವರಿಷ್ಠರು ಸೂಚಿಸಿದರೂ ಕಷ್ಟ ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವುದಾದರೆ ಅದು ದೊಡ್ಡ ಗೌರವ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿರುವುದರಿಂದ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ. 

ಅವರು ಆಡಳಿತದ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ. ಹೀಗಿರುವಾಗ ಇಡೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸಬೇಕಾಗುತ್ತದೆ. ಆದರೆ, ಸದ್ಯ ನನಗೆ ಅಷ್ಟು ಆರೋಗ್ಯವಿಲ್ಲ. ಆರೋಗ್ಯ ವಿಷಯದಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಹೀಗಾಗಿ, ನಾನು ಆ ಜವಾಬ್ದಾರಿಯನ್ನು ನಿಭಾಯಿಸಲು ಸಮರ್ಥನಲ್ಲ ಎಂಬ ಅಭಿಪ್ರಾಯವನ್ನು ವಿಶ್ವನಾಥ್ ಅವರು ತಮ್ಮ ಆಪ್ತರ ಬಳಿ ಹೊರಹಾಕಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. 

ಒಬಿಸಿ ವರ್ಗಕ್ಕೇ ರಾಜ್ಯಾಧ್ಯಕ್ಷ ಸ್ಥಾನ: ಪಕ್ಷದ ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇತರೆ ಹಿಂದುಳಿದ ವರ್ಗ ದವರನ್ನೇ ನೇಮಕ ಮಾಡುವ ಬಗ್ಗೆ ದೇವೇಗೌಡರು ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಮೊದಲ ಹೆಸರು ವಿಶ್ವನಾಥ್ ಅವರದ್ದು. ನಂತರ ದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಮತ್ತಿತರರ ಹೆಸರು ಕೇಳಿಬಂದಿದೆ. ಲೋಕಸಭಾ ಚುನಾವಣೆಯ ಜಾತಿ ಸಮೀಕರಣದ ಅನುಸಾರ ಇತರೆ ಹಿಂದುಳಿದ ವರ್ಗದವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ಅನುಕೂಲವಾಗುತ್ತದೆ ಎಂಬ ನಿಲುವು ಗೌಡರದ್ದು. 

ಸಮಿತಿ ರಚನೆ ಸಾಧ್ಯತೆ: ನೂತನ ರಾಜ್ಯಾಧ್ಯಕ್ಷರನ್ನುಆಯ್ಕೆ ಮಾಡುವ ಸಂಬಂಧ ಹಿರಿಯ ನಾಯಕರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವ ಬಗ್ಗೆಯೂ ದೇವೇಗೌಡರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader