ಯುವರಾಜ್ ಸಿಂಗ್ ಆಯೋಜಿಸಿದ್ದ 'ಯಸ್ ವೀ ಕ್ಯಾನ್' ಎಂಬ ಕ್ಯಾನ್ಸರ್ ಚಾರಿಟಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕೆಲವು ತಾರೆಯರ ಸಂದೇಶಗಳನ್ನು ಚುರುಕಾಗಿ ಗ್ರಹಿಸಿರುವ ಸೆಹ್ವಾಗ್ ಅದನ್ನು ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಸೆ.05): ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್'ನಲ್ಲಿ ಸಕ್ರಿಯವಾಗಿರುವ ಮಾಜಿ ಕ್ರಿಕೆಟಿಗ ಒಂದೇ ಟ್ವೀಟ್'ನಲ್ಲಿ ನಾಲ್ವರು ಕ್ರೀಡಾತಾರೆಯರ ಕಾಲೆಳೆದಿದ್ದಾರೆ.

ಬ್ರಾಡ್'ಮ್ಯಾನ್ ಜನ್ಮದಿನಕ್ಕೆ ವಿನೂತನವಾಗಿ ಶುಭಕೋರಿದ್ದ ಸೆಹ್ವಾಗ್ ಬ್ರಿಟೀಷ್ ಪತ್ರಕರ್ತ ಮಾಡಿದ್ದ ವ್ಯಂಗ್ಯಕ್ಕೂ ಸರಿಯಾಗೇ ಟಾಂಗ್ ನೀಡಿದ್ದು ಈಗ ಹಳೆಯ ಸುದ್ಧಿ. ಹಾಗಾದರೆ ಹೊಸತೇನು ಅಂತೀರಾ? ಕ್ರಿಸ್'ಗೇಲ್, ರೋಹಿತ್ ಶರ್ಮಾ ಜೊತೆಗಿರುವ ಚಿತ್ರವೊಂದು ಹಾಕಿರುವ ಸೆಹ್ವಾಗ್ ನಾಲ್ಕು ಟೆಸ್ಟ್ ತ್ರಿಶತಕ, ನಾಲ್ಕು ಒನ್ ಡೇ ದ್ವಿಶತಕ ಬಾರಿಸಿದವರು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ಮಿ. ಟ್ಯಾಲೆಂಟ್ ರೋಹಿತ್ ಶರ್ಮಾ ಹಾಗೂ ನಾನು ಒಂದೇ ಚಿತ್ರದಲ್ಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇದಷ್ಟೇ ಅಲ್ಲದೇ ಶನಿವಾರ ಯುವರಾಜ್ ಸಿಂಗ್ ಆಯೋಜಿಸಿದ್ದ 'ಯಸ್ ವೀ ಕ್ಯಾನ್' ಎಂಬ ಕ್ಯಾನ್ಸರ್ ಚಾರಿಟಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕೆಲವು ತಾರೆಯರ ಸಂದೇಶಗಳನ್ನು ಚುರುಕಾಗಿ ಗ್ರಹಿಸಿರುವ ಸೆಹ್ವಾಗ್ ಅದನ್ನು ಟ್ವೀಟ್ ಮಾಡಿದ್ದಾರೆ.

ಯುವರಾಜ್ ಸಿಂಗ್ ಆಯೋಜಿಸಿದ್ದ ಕಾರ್ಯಕ್ರಮ ಸಂಜೆ ಕ್ಷಣಗಳು ಅದ್ಭುತವಾಗಿದ್ದವು. ಆದರೆ ಸೈನಾ ನೆಹ್ವಾಲ್, ಎಬಿ ಡಿವಿಲಿಯರ್ಸ್, ಗೌತಮ್ ಗಂಭೀರ್ ಹಾಗೂ ಅಜಿಂಕ್ಯ ರಹಾನೆ, ಒಂದೇ ಟ್ಯೂಷನ್'ನಿಂದ ಬಂದಿದ್ದಾರೆಯೇ ಎಂದು ಕಾಲೆಳೆದಿದ್ದಾರೆ.