2017 ರಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಕ್ರೀಡಾ ಕ್ಷೇತ್ರದ ಟ್ವೀಟ್‌'ಗಳ ಪಟ್ಟಿಯನ್ನು ಟ್ವೀಟರ್ ಪ್ರಕಟಿಸಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಾವು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಗಿ ಮಾಡಿದ ಟ್ವೀಟ್‌ಗೆ ‘ವರ್ಷದ ಗೋಲ್ಡನ್ ಟ್ವೀಟ್’ ಗೌರವ ದೊರೆತಿದೆ.
ನವದೆಹಲಿ (ಡಿ.29): 2017 ರಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಕ್ರೀಡಾ ಕ್ಷೇತ್ರದ ಟ್ವೀಟ್'ಗಳ ಪಟ್ಟಿಯನ್ನು ಟ್ವೀಟರ್ ಪ್ರಕಟಿಸಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಾವು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಗಿ ಮಾಡಿದ ಟ್ವೀಟ್ಗೆ ‘ವರ್ಷದ ಗೋಲ್ಡನ್ ಟ್ವೀಟ್’ ಗೌರವ ದೊರೆತಿದೆ.
ಇನ್ನು ಕೊಹ್ಲಿ ಜನವರಿಯಲ್ಲಿ ಎಂ.ಎಸ್ ಧೋನಿ ಸೀಮಿತ ಓವರ್ ನಾಯಕತ್ವ ತ್ಯಜಿಸಿದಾಗ ಮಾಡಿದ ಟ್ವೀಟ್ ‘ವರ್ಷದ ಐಕಾನಿಕ್ ಟ್ವೀಟ್’ ಎಂದು ಕರೆಸಿಕೊಂಡಿದೆ. ಇದೇ ವೇಳೆ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯ ಸೆಲಿಬ್ರಿಟಿಗಳ ಪೈಕಿ ವಿರಾಟ್, ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದು, ಕೊಹ್ಲಿ ಮಾಡಿದ ಟ್ವೀಟ್ಗಳು ಅತಿಹೆಚ್ಚು ಬಾರಿ ರೀಟ್ವೀಟ್ ಆಗಿವೆ ಎಂದು ತಿಳಿದುಬಂದಿದೆ.
