ಬಹುಕೋಟಿ ಒಪ್ಪಂದ ತಿರಸ್ಕರಿಸಿದ ಕೊಹ್ಲಿ : ಯಾವ ಕಾರಣಕ್ಕೆ ಗೊತ್ತೆ ?
ನವದೆಹಲಿ(ಸೆ.15): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಂಪುಪಾನೀಯ ಕಂಪನಿಯೊಂದು ನೀಡಿದ್ದ ಬಹುಕೋಟಿ ಒಪ್ಪಂದದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ತಾನು ಬಳಸದ ವಸ್ತುಗಳ ಬಗ್ಗೆ ಪ್ರಚಾರ ಮಾಡುವುದು ಸೂಕ್ತವಲ್ಲ ಎಂಬ ಕಾರಣದಿಂದ ವಿರಾಟ್ ಈ ನಿರ್ಧಾರ ಕೈಗೊಂಡಿದ್ದಾರೆ. ಫಿಟ್‌ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸುವ ವಿರಾಟ್, ತಮ್ಮ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ.
