ಅನುಷ್ಕಾ ಹಾಗೂ ವಿರಾಟ್ ಸ್ನೇಹಿತರು, ಸಂಬಂಧಿಕರು ಈಗಾಗಲೇ ಡೆಹ್ರಾಡೂನ್'ನಲ್ಲಿ ಬೀಡುಬಿಟ್ಟಿದ್ದಾರೆ ಎಂದೂ ವರದಿಯಾಗಿದೆ.

ಉತ್ತರಾಖಾಂಡ್‌ನ ಡೆಹ್ರಾಡೂನ್‌'ಗೆ ಇದ್ದಕ್ಕಿದ್ದಂತೆ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಆಮೀರ್ ಖಾನ್ ಹೋಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಅಲ್ಲಿಗೆ ಪ್ರೇಮಿಗಳಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಹೋಗಿದ್ದಾರೆ. ಬಾಲಿವುಡ್ ತಾರೆಗಳೆಲ್ಲರೂ ಅಲ್ಲಿ ನಿಧಾನವಾಗಿ ಜಮಾಯಿಸುತ್ತಿರುವುದು ಕೊಹ್ಲಿ ಹಾಗೂ ಅನುಷ್ಕಾ ಮದುವೆ ನಿಶ್ಚಿತಾರ್ಥಕ್ಕೇ ಎನ್ನಲಾಗುತ್ತಿದ್ದು, ಜ. 1ರಂದು ಈ ಕಾರ್ಯಕ್ರಮ ನಡೆಯಬಹುದೆಂದು ಕೆಲ ಮಾಧ್ಯಮಗಳು ಊಹಿಸಿವೆ.

ಅನುಷ್ಕಾ ಹಾಗೂ ವಿರಾಟ್ ಸ್ನೇಹಿತರು, ಸಂಬಂಧಿಕರು ಈಗಾಗಲೇ ಡೆಹ್ರಾಡೂನ್'ನಲ್ಲಿ ಬೀಡುಬಿಟ್ಟಿದ್ದಾರೆ ಎಂದೂ ವರದಿಯಾಗಿದೆ.