Asianet Suvarna News Asianet Suvarna News

ನಾಯಿಗೆ ಶಾಂಪೂ ಹಚ್ಬೇಕು: ಚಿಂಪಾಂಜಿ ಸಾಹಸ ನೀವೊಮ್ಮೆ ನೋಡ್ಬೇಕು!

ನಾಯಿಯನ್ನು ಸ್ನಾನ ಮಾಡಿಸಲು ಚಿಂಪಾಂಜಿಗಳ ಪೈಪೋಟಿ!| ನಾಯಿಗೆ ಶಾಂಪೂ ಹಚ್ಬೇಕು: ಚಿಂಪಾಂಜಿ ಸಾಹಸ ನೀವೊಮ್ಮೆ ನೋಡ್ಬೇಕು!

Viral Video Of Two Chimps Bathing A Dog Delights Internet
Author
Bangalore, First Published Aug 6, 2019, 12:57 PM IST
  • Facebook
  • Twitter
  • Whatsapp

ನವದೆಹಲಿ[ಆ.06]: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಮುಖದಲ್ಲಿ ನಗು ಮೂಡುವುದರಲ್ಲಿ ಅನುಮಾನವಿಲ್ಲ. ಎರಡು ಚಿಂಪಂಜಿಗಳು ನಾಯಿಯೊಂದಕ್ಕೆ ಶಾಂಪೂ ಹಾಕಿ ಸ್ನಾನ ಮಾಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದವರೆಲ್ಲಾ 'ಇಂತಹ ಪರ್ಫೆಕ್ಟ್ ಕೆಲಸ ಎಲ್ಲೂ ಇಲ್ಲ' ಎಂದು ಕಮೆಂಟ್ ಮಾಡಿದ್ದಾರೆ.

ವ್ಯಕ್ತಿಯೊಬ್ಬ ತನ್ನ ನಾಯಿಯನ್ನು ಸ್ನಾನ ಮಾಡಿತ್ತಿದ್ದು, ಈ ವೇಳೆ ಅಲ್ಲಿದ್ದ ಎರಡು ಚಿಂಪಾಂಜಿಗಳು ಪೈಪೋಟಿಗಿಳಿದಂತೆ ತಾವೂ ಕೈಗೆ ಶಾಂಪೂ ಹಾಕಿ ನಾಯಿಯನ್ನು ಸ್ನಾನ ಮಾಡಿಸಲಾರಂಭಿಸಿವೆ. 

 
 
 
 
 
 
 
 
 
 
 
 
 

Splish splash doggo taking a bathe 🦍♾🐕 @myrtlebeachsafari

A post shared by Kody Antle (@kodyantle) on Aug 1, 2019 at 3:35am PDT

ಈ ವಿಡಿಯೋವನ್ನು 70 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 9 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಈ ಪೋಸ್ಟ್ ಗೆ ಕಂಎಂಟ್ ಮಾಡುತ್ತಾ 'ಇದು ಈ ವರ್ಷದ ಅತ್ಯಂತ ಬೆಸ್ಟ್ ವಿಡಿಯೋ, ಮೊದಲ ಬಾರಿ ಕೋತಿ ಹಾಗೂ ನಾಯಿ ನಡುವಿನ ಪ್ರೀತಿ ನೋಡಿದ್ದೇನೆ' ಎಂದಿದ್ದಾರೆ. ಈ ಘಟನೆ ನಡೆದಿದ್ದೆಲ್ಲಿ ಎಂಬ ಮಹಿತಿ ಇನ್ನೂ ಲಭ್ಯವಾಗಿಲ್ಲ.
 

Follow Us:
Download App:
  • android
  • ios