ಕೆರೆಯಲ್ಲಿ ಬಿದ್ದ  ಚೆಂಡೊಂದನ್ನು ತೆಗೆದುಕೊಳ್ಳಲು ಪುಟ್ಟ ಮಗುವು ಹೆಜ್ಜೆ ಇಡುತ್ತ ಮುಂದೆ ಮುಂದೆ ಸಾಗುತ್ತಿತ್ತು. ಇದನ್ನು ಹತ್ತಿರದಿಂದ ನೋಡುತ್ತಿದ್ದ ಶ್ವಾನ ತಕ್ಷಣವೇ ಹೋಗಿ ಮಗುವಿನ ಸ್ಕರ್ಟ್ ಹಿಡಿದು ಹಿಂದಕ್ಕೆ ಎಳೆದು ತಂದಿದೆ. ಅಲ್ಲದೇ ಶ್ವಾನ ತಾನೇ ಮುಂದೆ ಹೋಗಿ ಚೆಂಡನ್ನು ತೆಗೆದುಕೊಂಡು ಬಂದಿದೆ.

ಮನುಷ್ಯ ಮತ್ತು ನಾಯಿ ನಡುವಿನ ಬಾಂಧ್ಯವ್ಯದ ಕತೆಗಳಿಗೆ ಸಾವಿರಾರು ಉದಾಹರಣೆಗಳಿವೆ. ಶ್ವಾನದ ಈ ಸಮಯಪ್ರಜ್ಞೆಯ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಒಂದು ನಾಗರ- ಮೂರು ಶ್ವಾನ ನಡುವೆ ಬಿಗ್ ಫೈಟ್! ಮುಂದೇನಾಯ್ತು?

ಅನೇಕರು ಪ್ರತಿಕ್ರಿಯೆ ನೀಡಿದ್ದು ತಮ್ಮ ಮನೆಯ ಶ್ವಾನ ಯಾವ ರೀತಿ ನೆಡೆದುಕೊಳ್ಳುತ್ತದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.