ಸೆಕ್ಸ್ ಪಾಠದ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ಒಂದಷ್ಟು ಮಂದಿಯ ಟೀಕೆಗೂ ಕಾರಣವಾಗಿದೆ.

ಸೆಕ್ಸ್, ಕಾಂಡೊಮ್ ಬಗ್ಗೆ ಮಡಿವಂತಿಕೆ ಸಾಮಾನ್ಯ, ನಮ್ಮ ದೇಶದಲ್ಲಂತೂ 'ಕಾಂಡೊಮ್' ಎಂದು ಹೇಳಲೂ ನಾಚಿಕೆಪಡುವಂಥ ಸ್ಥಿತಿಯಿದೆ. ಆದರೆ ಮೆಕ್ಸಿಕೊದ ಓರ್ವ ಸಂಸದೆ ಯಾವುದೇ ಅಳುಕಿಲ್ಲದೆ ಯುವಕರಿಗೆ 'ಕಾಂಡೊಮ್ ಪಾಠ' ಹೇಳಲು ಹೋಗಿ ಸುದ್ದಿಯಾಗಿದ್ದಾರೆ.ಮೆಕ್ಸಿಕೊ ಸಂಸದೆ ಡಿಯೊನ್ ಆ್ಯಂಗುಯಿಯಾಮೊ ಹೇಳಿಕೊಟ್ಟ ಸೆಕ್ಸ್ ಪಾಠದ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ಒಂದಷ್ಟು ಮಂದಿಯ ಟೀಕೆಗೂ ಕಾರಣವಾಗಿದೆ. ಯುವಜನರ ಸಮ್ಮುಖದಲ್ಲಿ ಸೆಕ್ಸ್ ಆಟಿಕೆಗೆ ಕಾಂಡೊಮ್ ಹಾಕುವ ಪ್ರಾತ್ಯಕ್ಷಿಕೆ ಸಂಸದೆ ನಡೆಸಿಕೊಟ್ಟಿದ್ದರು.ಟೀಕಾಕಾರರಿಗೆ ಕಿವಿಗೊಡದ ಡಿಯೋನ್, ಯುವ ಜನತೆಗೆ ಸುರಕ್ಷಿತ ಲೈಂಗಿಕತೆಗೆ ಪ್ರೋತ್ಸಾಹ ನೀಡುತ್ತಿದ್ದೇನೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred