ಸ್ನಿಕರ್ಸ್‌ ಚಾಕೋಲೆಟ್ ಬಾರ್‌ನಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ, ಈ ಹಿನ್ನೆಲೆಯಲ್ಲಿ ಒಮ್ಮೆಲೇ ಟನ್‌ಗಟ್ಟಲೆ ಸ್ನಿಕರ್ಸ್‌ ಚಾಕೋಲೆಟ್ ಬಾರ್ ಬಾಕ್ಸ್‌ಗಳನ್ನು ಸುಡಲಾಗುತ್ತಿದೆ ಎಂಬ ಅಡಿಬರಹವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು (ಮಾ.11): ಸ್ನಿಕರ್ಸ್‌ ಚಾಕೋಲೆಟ್ ಬಾರ್‌ನಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ, ಈ ಹಿನ್ನೆಲೆಯಲ್ಲಿ ಒಮ್ಮೆಲೇ ಟನ್‌ಗಟ್ಟಲೆ ಸ್ನಿಕರ್ಸ್‌ ಚಾಕೋಲೆಟ್ ಬಾರ್ ಬಾಕ್ಸ್‌ಗಳನ್ನು ಸುಡಲಾಗುತ್ತಿದೆ ಎಂಬ ಅಡಿಬರಹವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ವಿಡಿಯೋದಲ್ಲಿ ಬಾಕ್ಸ್‌ಗಟ್ಟಲೆ ಸ್ನಿಕರ್ಸ್‌ ಚಾಕೊಲೇಟ್‌ಗಳನ್ನು ಎಸೆದು ಸುಡಲಾಗುತ್ತಿದೆ. ಆದರೆ ನಿಜಕ್ಕೂ ಸ್ನಿಕರ್ಸ್‌ ಚಾಕೋಲೆಟ್‌ನಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಟನ್‌'ಗಟ್ಟಲೆ ಸ್ನಿಕರ್ಸ್‌ ಬಾರ್‌ಗಳನ್ನು ಸುಡಲಾಯಿತೇ ಎಂದು ಹುಡುಕಹೊರಟಾಗ ಈ ವಿಡಿಯೋ ಹಿಂದಿನ ಅಸಲಿ ಕತೆ ಬಯಲಾಗಿದೆ. ವಾಸ್ತವವಾಗಿ ಇದು ಎರಡು ವರ್ಷದ ಹಿಂದಿನ ವಿಡಿಯೋ. ಅಂದರೆ 2016 ರಲ್ಲಿ ಗಾಜಾದ ಸ್ನಿಕರ್ಸ್‌ ತಯಾರಿಕಾ
ದೈತ್ಯ ಕಂಪನಿ ‘ಮಾರ್ಸ್‌’ನ ಡಚ್ ಕಾರ್ಖಾನೆಯೊಂದರಲ್ಲಿ ತಯಾರಾದ ಸ್ನಿಕರ್ಸ್‌ಗಳಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 15 ಟನ್ ಸ್ನಿಕರ್ಸ್‌ ಬ್ಯಾಗ್‌ಗಳನ್ನು ಸುಟ್ಟು ಹಾಕಿತ್ತು. ಜರ್ಮನಿಯಲ್ಲಿ ಗ್ರಾಹಕರೊಬ್ಬರಿಗೆ ಸ್ನಿಕರ್ಸ್‌ನಲ್ಲಿ ಪ್ಲಾಸ್ಟಿಕ್ ತುಣುಕೊಂದು ಸಿಕ್ಕ ನಂತರದಲ್ಲಿ ಮಿಲಿಯನ್‌ಗಟ್ಟಲೆ ಸ್ನಿಕರ್ಸ್‌ ಚಾಕೋಲೆಟ್ ಬ್ಯಾಗ್‌ಗಳನ್ನು ೫೫ ರಾಷ್ಟ್ರಗಳಲ್ಲಿ ಬಳಕೆಗೆ ಅಸುರಕ್ಷಿತ ಎಂದು ಪರಿಗಣಿಸಲಾಗಿತ್ತು. ಅನಂತರ ಕಂಪನಿ ಈ ಕ್ರಮಕ್ಕೆ ಮುಂದಾಗಿತ್ತು.

ಬೂಮ್ ಲೈವ್ ‘ಮಾರ್ಸ್‌ ಇಂಕ್’ ಕಂಪನಿ ಬಳಿಯೇ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಕಂಪನಿ ಕೂಡ ‘ಇದೊಂದು ಹಳೆಯ ವಿಡಿಯೋ. 2016 ರಲ್ಲಿ ಜರ್ಮ ನಿಯ ಗ್ರಾಹಕರೊಬ್ಬರಿಗೆ ಸ್ನಿಕರ್ಸ್ನಲ್ಲಿ ಪ್ಲಾಸ್ಟಿಕ್ ತುಣುಕೊಂದು ಸಿಕ್ಕ ನಂತರ 55 ರಾಷ್ಟ್ರ ಗಳಲ್ಲಿ ಇದರ ಬಳಕೆ ಅಸುರಕ್ಷಿತ ಎಂದು ಘೋಷಿಸಿದ ನಂತರ ಕಂಪನಿ ಈ ಕ್ರಮಕ್ಕೆ ಮುಂದಾಗಿತ್ತು’ ಎಂದು ಹೇಳಿದೆ.