ಮೋದಿಯಿಂದ ಹೊಸ ವ್ಯವಸ್ಥೆ: ಸ್ತ್ರೀಯರು ಎಸ್ಸೆಮ್ಮೆಸ್ಸ್ ಮಾಡಿದ್ರೆ ಪೊಲೀಸರು ಬರ್ತಾರೆ!?

https://static.asianetnews.com/images/authors/b348a094-0bef-5801-a1f6-61e57071185f.jpg
First Published 26, Jul 2018, 10:28 AM IST
Viral Check Women’s safety Hoax message goes viral
Highlights

ಮಹಿಳೆಯರ ರಕ್ಷಣೆಗೆ ಅಪ್ಲಿಕೇಶನ್ ಒಂದು ಬಂದಿದ್ದು ಪೊಲೀಸರಿಗೆ ತಕ್ಷಣ ಸಂದೇಶ ರವಾನಿಸುತ್ತದೆ ಎಂಬ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ನವದೆಹಲಿ[ಜು.26]  ಮಹಿಳೆಯರು ಒಂಟಿಯಾಗಿ ಆಟೋ ಅಥವಾ ಟ್ಯಾಕ್ಸಿ ಮೂಲಕ ರಾತ್ರಿ ಹೊತ್ತು ಪ್ರಯಾಣಿಸುವಾಗ ವಾಹನದ ನಂಬರ್ ಅನ್ನು  9969777888ಎಂಬ ಪೊಲೀಸ್ ನಂಬರ್‌ಗೆ ಸಂದೇಶ ಕಳುಹಿಸಬಹುದು. ಪೊಲೀಸರು ಜಿಪಿಆರ್‌ಎಸ್ ಮೂಲಕ ಆ ವಾಹನದ ಮೇಲೆ ನಿಗಾ ಇಟ್ಟಿರುತ್ತಾರೆ’ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯೋಗಿ ಆದಿತ್ಯನಾಥ-ಟ್ರ್ಯೂ ಇಂಡಿಯನ್’ ಎಂಬ ಫೇಸ್‌ಬುಕ್ ಪೇಜ್ ಈ ಸಂದೇಶವನ್ನು ಮೊದಲಿಗೆ ಪೋಸ್ಟ್ ಮಾಡಿದ್ದು, ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಿ’ ಎಂದು ಹೇಳಲಾಗಿದೆ. ನರೇಂದ್ರ ಮೋದಿಯವರಿರುವ ಚಿತ್ರದೊಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನೂತನ ಸಹಾಯವಾಣಿಯನ್ನು ಪ್ರಾರಂಭಿಸಿದೆ ಎಂದು ಕೂಡ ಹೇಳಲಾಗಿದೆ.

ಸದ್ಯ ಈ ಸಂದೇಶವನ್ನು 3000 ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಈ ಘೋಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವೀಟರ್‌ನಲ್ಲಿ ವಿವಿಧ ಭಾಷೆಗಳಲ್ಲಿ ಶೇರ್ ಆಗಿದೆ. ಆದರೆ ನಿಜಕ್ಕೂ ಮೋದಿ ಸರ್ಕಾರ ಮಹಿಳೆಯರ ಭದ್ರತೆಗಾಗಿ ನೂತನ ಸಹಾಯವಾಣಿಯನ್ನು ಪ್ರಾರಂಭಿಸಿತ್ತೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ಈ ಸಂದೇಶವು 2014ರಿಂದಲೇ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ದೆಹಲಿ ಮತ್ತಿತರ ರಾಜ್ಯಗಳ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಾಸ್ತವವಾಗಿ ಈ ಸಹಾಯವಾಣಿಯನ್ನು 2014ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮುಂಬೈ ಪೊಲೀಸರು ಪ್ರಾರಂಭಿಸಿದ್ದರು. ಈ ಸಹಾಯವಾಣಿ ಸಂಖ್ಯೆಯು ಮುಂಬೈ ಪೊಲೀಸ್ ಹಾಗೂ ಮಹಾನಗರ ಟೆಲಿಫೋನ್ ನಿಗಮದೊಂದಿಗೆ ಸಂಪರ್ಕ ಹೊಂದಿತ್ತು. ಸಹಾಯವಾಣಿ ಸಂಖ್ಯೆ ‘100’ ಅನ್ನು ಡಯಲ್ ಮಾಡಿದಾಗ ಪಿಸಿಆ ರ್ ವ್ಯಾನ್ ಮಹಿಳೆಯ ನೆರವಿಗೆ ಧಾವಿಸುವ ವಿನೂತನ ಕ್ರಮ ಅದಾಗಿತ್ತು. ಆದರೆ ಈ
ಸಹಾಯವಾಣಿಯು ವಿವಿಧ ರಾಜ್ಯಗಳಲ್ಲಿ ಅನೇಕ ಸಾರಿ ಸುಳ್ಳು ಸುದ್ದಿ ಹರಡಲು ಕಾರಣವಾಗಿತ್ತು.

loader