[ವೈರಲ್ ಚೆಕ್] ಹಿಂದು ಸಾಧು ಮತ್ತು ಮುಸ್ಲಿಂ ಮೌಲ್ವಿಯ ಮದ್ಯದ ಪಾರ್ಟಿ!

news | 12/12/2017 | 10:10:00 AM
isthiyakh
Suvarna Web Desk
Highlights

ಕೇಸರಿ ನಿಲುವಂಗಿ ಧರಿಸಿರುವ ಹಿಂದು ಸಾಧುಗೆ ಮುಸ್ಲಿಂ ಮೌಲ್ವಿಯೊಬ್ಬರು ಮದ್ಯವನ್ನು ಹಂಚುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಸಖತ್ ವೈರಲ್ ಆಗಿದೆ. ಈ ಪೋಟೋಗೆ ಸಾಕಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿದೆ.

ಕೇಸರಿ ನಿಲುವಂಗಿ ಧರಿಸಿರುವ ಹಿಂದು ಸಾಧುಗೆ ಮುಸ್ಲಿಂ ಮೌಲ್ವಿಯೊಬ್ಬರು ಮದ್ಯವನ್ನು ಹಂಚುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಸಖತ್ ವೈರಲ್ ಆಗಿದೆ. ಈ ಪೋಟೋಗೆ ಸಾಕಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿದೆ.

ಹಾಗಾದರೆ ನಿಜವಾಗಿಯೂ ಮುಸ್ಲಿಂ ಮೌಲ್ವಿ ಮತ್ತು ಹಿಂದು ಸಾಧುಗಳಿಬ್ಬರು ಮದ್ಯ ಕುಡಿಯುತ್ತಿದ್ದರೇ ಎಂದು ಇದರ ಸತ್ಯಾಸತ್ಯತೆಯನ್ನು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆಯದಾಗಿತ್ತು. ಮುಸ್ಲಿಂ ಮೌಲ್ವಿಯೊಬ್ಬರು ಕೇಸರಿ ನಿಲುವಂಗಿ ಧರಿಸಿರುವ ವ್ಯಕ್ತಿಗೆ ನೀರು ಕೊಡುತ್ತಿರುವ ಫೋಟೋವನ್ನು ಪೋಟೋ ಶಾಪ್ ಮೂಲಕ ಎಡಿಟ್ ಮಾಡಿ ಈ ರೀತಿ ತಿರುಚಲಾಗಿತ್ತು.

ಆದರೆ ಫೋಟೋಶಾಫ್‌ನಲ್ಲಿ ಎಡಿಟ್ ಮಾಡುವ ವೇಳೆ ಲೋಟದ ಬಣ್ಣವನ್ನು ತಿರುಚಲು ಮರೆತು ಬಿಟ್ಟಿರುವುದು ಈ ಫೋಟೋದಲ್ಲಿ ಸ್ಪಷ್ಟವಾಗುತ್ತದೆ.

ನಿಜಾರ್ಥದಲ್ಲಿ ಈ ಪೋಟೋ ಹಿಂದು ಮತ್ತು ಮುಸ್ಲಿಂ ಧಾರ್ಮಿಕ ಸಾಮರಸ್ಯವನ್ನು ಸೂಚಿಸುತ್ತದೆ. ಆದರೆ ಈ ರೀತಿ ಫೋಟೋಶಾಪ್ ಮೂಲಕ ತಿರುಚಿ ಮತ್ತೊಂದು ರೀತಿಯಲ್ಲಿ ಬಿಂಬಿಸಲಾಗಿದೆ.

Comments 0
Add Comment

  Related Posts

  BJP MLA Video Viral

  video | 4/13/2018

  UP Viral Video

  video | 3/30/2018

  Suresh Gowda Reaction about Viral Video

  video | 4/13/2018 | 11:47:30 AM
  Chethan Kumar
  Associate Editor