ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹಿಂದೆಂದಿಗಿಂತಲೂ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ತಮಗೆ ಅರಿವಿಲ್ಲದಂತೆ ಮಾಡಿದ ಒಂದು ತಪ್ಪಿನಿಂದ ಕಾಂಗ್ರೆಸ್ ಬದಲು ಬಿಜೆಪಿ ಪರ ರಾಹುಲ್ ಪ್ರಚಾರ ಮಾಡಿದ್ದಾರಂತೆ. ರಾಹುಲ್ ಏಕೆ ಬಿಜೆಪಿ ಪರ ಪ್ರಚಾರ ಮಾಡಿದರು ಎಂದು ಅಚ್ಚರಿಯಾಯಿತೇ?

ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ರಾಹುಲ್, ಬಾಲಕನೊಬ್ಬನನ್ನು ವೇದಿಕೆಗೆ ಕರೆದು ಆತನ ಭುಜದ ಮೇಲೆ ಕೈ ಇಟ್ಟು ಸಂವಾದ ನಡೆಸಿದ್ದರು. ಆದರೆ, ಆ ಬಾಲಕ ಯಾವ ಬಟ್ಟೆಯನ್ನು ತೊಟ್ಟಿದ್ದಾನೆ ಎನ್ನುವುದನ್ನೇ ರಾಹುಲ್ ಸೂಕ್ಷ್ಮವಾಗಿ ಗ್ರಹಿಸಿರಲಿಲ್ಲ.

ವೇದಿಕೆಗೆ ಬಂದ ಬಾಲಕ ಕೇಸರಿ ಅಂಗಿ ತೊಟ್ಟಿದ್ದ. ಆತ ಧರಿಸಿದ್ದ ಟೀ ಶರ್ಟ್ ಮೇಲೆ ಬಿಜೆಪಿ ಎಂದು ಬರೆದಿತ್ತು. ಜೊತೆಗೆ ಕಮಲದ ಚಿಹ್ನೆಯೂ ಇತ್ತು. ಹೀಗಿದ್ದ ಮೇಲೆ ಕೇಳಬೇಕೆ ಸಮಾವೇಶ ಮುಗಿಯುವುದರೊಳಗೆ ಫೋಟೋ ವೈರಲ್ ಆಗಿದೆ.

ರಾಹುಲ್ ಗಾಂಧಿ ಬಿಜೆಪಿ ಹೆಸರು ಮತ್ತು ಕಮಲದ ಚಿತ್ರ ಇರುವ ಟೀ- ಶರ್ಟ್ ಧರಿಸಿದ್ದ ಬಾಲಕನನ್ನು ಕಾಂಗ್ರೆಸ್ ಮುಖಂಡರ ಎದುರಿನಲ್ಲೇ ಹಿಡಿದುಕೊಂಡಿರುವ ಫೋಟೋ ಬಗ್ಗೆ ಇದೀಗ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ, ಇದರಲ್ಲಿ ರಾಹುಲ್ ಗಾಂಧಿ ಅವರ ತಪ್ಪೇನೂ ಇಲ್ಲ. ರಾಹುಲ್ ಜೊತೆಗಿರುವ ಬಾಲಕ ಧರಿಸಿದ್ದ ಟೀ-ಶರ್ಟ್‌ನಲ್ಲಿ ಬೇರೆ ಏನೋ ಬರೆದಿತ್ತು. ಅದನ್ನು ಫೋಟೋಶಾಪ್‌ನಿಂದ ಅಳಿಸಿ ಬಿಜೆಪಿ ಹೆಸರು ಮತ್ತು ಕಮಲದ ಚಿತ್ರವನ್ನು ಜೋಡಿಸಲಾಗಿದೆ.

ಈ ಚಿತ್ರವನ್ನು ಯಾರೋ ಬೇಕಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ರಾಹುಲ್ ಬಿಜೆಪಿ ಟೀ- ಶರ್ಟ್ ಧರಿಸಿದ್ದಬಾಲಕನ ಜೊತೆಗಿರುವ ಫೋಟೋದಲ್ಲಿ ಸತ್ಯಾಂಶ ಇಲ್ಲ ಎಂದು ತಿಳಿದುಬಂದಿದೆ.