ಪ್ರತಿಯೊಬ್ಬರಿಗೂ ಪ್ರಧಾನಿ ಮೋದಿ ಉಚಿತ ಲ್ಯಾಪ್‌ಲಾಪ್‌ ಹಂಚಿಕೆ ..?

Viral Check PM Modi Distribute Free Laptop
Highlights

ಪ್ರಧಾನಿ ನರೇಂದ್ರ ಮೋದಿ ಅವರ ಉಚಿತ ಲ್ಯಾಪ್ ಟಾಪ್ ಹಂಚಿಕೆ ಯೋಜನೆಯಡಿಯಲ್ಲಿ ಇಂದಿನಿಂದಲೇ ನೀವು ಉಚಿತ ಲ್ಯಾಪ್‌ಟಾಪ್‌ಗಾಗಿ ನೋಂದಾಯಿಸಬಹುದು. ಇಂದಿನಿಂದಲೇ ಹೆಸರು ನೋಂದಾಯಿಸಿ, ತಡ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಸುದ್ದಿಯೊಂದು ವೈರಲ್ ಆಗಿದೆ.  

(ವೈರಲ್ ಚೆಕ್)

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದ್ದಾರೆ ಎಂಬಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಹೀಗೆ ವೈರಲ್‌ ಆಗಿರುವ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉಚಿತ ಲ್ಯಾಪ್‌ಟಾಪ್‌ ಪಡೆಯಿರಿ. ನರೇಂದ್ರ ಮೋದಿ ಉಚಿತ ಲ್ಯಾಪ್‌ಟಾಪ್‌ ಯೋಜನೆಯಿಂದ ಫ್ರೀ ಲ್ಯಾಪ್‌ಟಾಪ್‌ ಪಡೆಯಲು ನಿಮ್ಮ ಹೆಸರನ್ನು ನೋಂದಾಯಿಸಿ. 

ಈ ಯೋಜನೆಯಡಿಯಲ್ಲಿ ಇಂದಿನಿಂದಲೇ ನೀವು ಉಚಿತ ಲ್ಯಾಪ್‌ಟಾಪ್‌ಗಾಗಿ ನೋಂದಾಯಿಸಬಹುದು. ಇಂದಿನಿಂದಲೇ ಹೆಸರು ನೋಂದಾಯಿಸಿ, ತಡ ಮಾಡಬೇಡಿ. ಇಂದಿನಿಂದ ಯಾವುದೇ ಸಮಯದಲ್ಲಿ ಬೇಕಾದರೂ ಈ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್‌ಗಾಗಿ ನೋಂದಾಯಿಸಬಹುದಾಗಿದೆ ಎಂದು ಹೇಳಲಾಗಿದೆ.

ಹೀಗೆ ಹೇಳಲಾದ ಸಂದೇಶದಲ್ಲಿರುವ ಲಿಂಕ್‌ ಒತ್ತಿದಾಗ ಈ ಉಚಿತ ಲ್ಯಾಪ್‌ಟಾಪ್‌ ಕೊಡುವಿಕೆಯ ನೋಂದಣಿ ಪ್ರಕ್ರಿಯೆ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಪೂರ್ಣ ಹೆಸರು, ನಿಮ್ಮ ರಾಜ್ಯದ ಹೆಸರು ಹಾಗೂ ಯಾವ ಬ್ರ್ಯಾಂಡ್‌ ಎಂದು ಭರ್ತಿ ಮಾಡಲು ಹೇಳಲಾಗುತ್ತದೆ. ಆದರೆ ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಇದನ್ನು ಕನಿಷ್ಠ 12 ಜನರಿಗೆ ಕಳುಹಿಸುವಂತೆ ಹೇಳಲಾಗುತ್ತದೆ. ಸದ್ಯ ಈ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ನಿಜಕ್ಕೂ ಪ್ರಧಾನಿ ಮೋದಿ ಉಚಿತ ಲ್ಯಾಪ್‌ಟಾಪ್‌ ಯೋಜನೆಯಡಿ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆಯೇ ಎಂದರೆ ಉತ್ತರ ಇಲ್ಲ. 

ಇದೊಂದು ಸಂಪೂರ್ಣ ಸುಳ್ಳು ಸುದ್ದಿ. ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿಯ ಯಾವುದೇ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಈ ರೀತಿಯ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಲು ಬೃಹತ್‌ ಪ್ರಮಾಣದ ಹಣ ಬೇಕಾಗುತ್ತದೆ. ಅಲ್ಲದೆ ಆ ಕುರಿತು ವರದಿಯಾಗುತ್ತದೆ. ಆದರೆ ಈ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಲ್ಲಿ ನಿಮ್ಮ ಮೊಬೈಲ್‌ನಲ್ಲಿ ವೈರಸ್‌ಗಳು ಸೇರಿಕೊಳ್ಳುತ್ತವೇ ವಿನಃ ಯಾವುದೇ ಲ್ಯಾಪ್‌ಟಾಪ್‌ ಉಚಿತವಾಗಿ ಸಿಗುವುದಿಲ್ಲ.

loader