Asianet Suvarna News Asianet Suvarna News

[ವೈರಲ್ ಚೆಕ್] ಮೋದಿ ಅತ್ಯುತ್ತಮ ಪ್ರಧಾನಿ: ವಿಶ್ವಸಂಸ್ಥೆ ಯುನೆಸ್ಕೋ ಘೋಷಣೆ!

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ವಿಭಾಗವಾದ ಯುನೆಸ್ಕೋ, ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಘೋಷಿಸಿದೆ. ಈ ವಿಷಯವನ್ನು ಎಲ್ಲೆಡೆ ಹಂಚಿಕೊಳ್ಳಿ. ದೇಶದ ಹೆಮ್ಮೆಯನ್ನು ಹಂಚಿಕೊಳ್ಳಿ ಎಂಬ ಸಂದೇಶವೊಂದು ಮತ್ತೆ ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿಮಾಡುತ್ತಿದೆ.

Viral Check PM Modi Declared as Best PM by UNESCO

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ವಿಭಾಗವಾದ ಯುನೆಸ್ಕೋ, ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಘೋಷಿಸಿದೆ. ಈ ವಿಷಯವನ್ನು ಎಲ್ಲೆಡೆ ಹಂಚಿಕೊಳ್ಳಿ. ದೇಶದ ಹೆಮ್ಮೆಯನ್ನು ಹಂಚಿಕೊಳ್ಳಿ ಎಂಬ ಸಂದೇಶವೊಂದು ಮತ್ತೆ ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿಮಾಡುತ್ತಿದೆ.

ಹಾಗೆಂದು ಇಂಥದ್ದೊಂದು ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಹಲವು ಬಾರಿ ಇಂಥದ್ದೊಂದು ಸುದ್ದಿ ಆಗಾಗ್ಗೆ ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ಬಹಳಷ್ಟು ಜನ ಇದನ್ನು ಸತ್ಯ ಎಂದು ನಂಬಿ ಬೇಸ್ತು ಬಿದ್ದಿದ್ದಾರೆ. ಆದರೆ ಇದೀಗ ವಾಟ್ಸಪ್ ಸಂದೇಶಗಳು ಹೆಚ್ಚು ಜನಪ್ರಿಯತೆ ಪಡೆದ ಬಳಿಕ ವಂತೂ ಮೋದಿ ಅವರನ್ನು ಯುನೆಸ್ಕೋ, ವಿಶ್ವದ ಅತ್ಯುತ್ತ ಮ ಪ್ರಧಾನಿ ಎಂದು ಘೋಷಿಸಿದ ಸುದ್ದಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ? ನಿಜಕ್ಕೂ ಯುನೆಸ್ಕೋ ಹೀಗೆ ಅತ್ಯುತ್ತಮ ಪ್ರಧಾನಿ ಗಳನ್ನು ಆಯ್ಕೆ ಮಾಡುತ್ತದೆಯೇ? ಉತ್ತರ- ಇಲ್ಲ. ಯುನೆಸ್ಕೋ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರವೇ ಗಮನ ಹರಿಸುತ್ತದೆ. ಅದನ್ನು ಬಿಟ್ಟು ಯಾವುದೇ ಸಂದರ್ಭದಲ್ಲೂ

ಅತ್ಯುತ್ತಮ ಪ್ರಧಾನಿಯನ್ನು ಆಯ್ಕೆ ಮಾಡುವ ಕೆಲಸ ಮಾಡಿಲ್ಲ. ಇದು ಯುನೆಸ್ಕೋ 1945ರಲ್ಲಿ ಆರಂಭವಾದಾಗಿನಿಂದಲೂ ನಡೆದು ಬಂದ ಸಂಪ್ರದಾಯ. ಇದರಲ್ಲಿ ಈಗಲೂ ಯಾವುದೇ ಬದಲಾವಣೆ ಇಲ್ಲ. ಹೀಗಾಗಿ ಯುನೆಸ್ಕೋ ಹೆಸರಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯವಲ್ಲ

Follow Us:
Download App:
  • android
  • ios