Asianet Suvarna News Asianet Suvarna News

ಪೊಲೀಸ್ ವೇಷದ ಸಿಪಿಎಂ ಗೂಂಡಾನಿಂದ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ..!

ಮೊದಲಿಗೆ ಬಲಪಂಥೀಯ ಸಂಘಟನೆಯೊಂದರಿಂದ ಈ ಫೋಟೋ ಮತ್ತು ವಿವರಣೆ ಟ್ವೀಟ್ ಆಗಿದೆ. ಅದು ಸಾವಿರಾರು ಬಾರಿ ರೀಟ್ವೀಟ್ ಆಗಿದೆ. ನಂತರ ಇದೇ ಫೋಟೋವನ್ನು ರಿಆರ್ಮಿಂಗ್ ಹಿಂದೂಯಿಸಂ ಎಂಬ ಗ್ರೂಪ್‌ನವರು ಫೇಸ್‌ಬುಕ್‌ನಲ್ಲಿ ಹಾಕಿ, ‘ಇವನು ವಲ್ಲಭ ದಾಸ್. ತ್ರಿವೇಂದ್ರಂನ ಸಿಪಿಎಂ ಕಾರ್ಯಕರ್ತ. ಇವನು ಕೇರಳ ಪೊಲೀಸ್ ಇಲಾಖೆಯವನಲ್ಲ. ಆದರೆ, ಈ ಗೂಂಡಾ ಪೊಲೀಸ್ ಸಮವಸ್ತ್ರ ಧರಿಸಿ ಅಯ್ಯಪ್ಪ ಭಕ್ತರ ಮೇಲೆ 5 ದಿನಗಳಿಂದ ದಾಳಿ ನಡೆಸುತ್ತಿದ್ದಾನೆ... ಲಾತ್ ಸಲಾಂ!!!’ ಎಂದು ಬರೆದಿದ್ದಾರೆ. 

Viral Check  Photo Of Kerala Cop Circulated As CPM Member Assaulting Sabarimala Protestors
Author
Bengaluru, First Published Oct 29, 2018, 11:08 AM IST

ಜನಜಂಗುಳಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ನಿಂತಿರುವ ವ್ಯಕ್ತಿಯೊಬ್ಬರ ಫೋಟೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈತ ಸಿಪಿಎಂ ಕಾರ್ಯಕರ್ತನಾಗಿದ್ದು, ಅಕ್ರಮವಾಗಿ ಪೊಲೀಸ್ ಸಮವಸ್ತ್ರ ಧರಿಸಿ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಇದು ಕೇರಳದಲ್ಲಿರುವ ಎಡಪಂಥೀಯ ಸರ್ಕಾರದ ಕುತಂತ್ರ ಎಂದು ಈ ಫೋಟೋಕ್ಕೆ ವಿವರಣೆ ಬರೆಯಲಾಗಿದೆ.

ಮೊದಲಿಗೆ ಬಲಪಂಥೀಯ ಸಂಘಟನೆಯೊಂದರಿಂದ ಈ ಫೋಟೋ ಮತ್ತು ವಿವರಣೆ ಟ್ವೀಟ್ ಆಗಿದೆ. ಅದು ಸಾವಿರಾರು ಬಾರಿ ರೀಟ್ವೀಟ್ ಆಗಿದೆ. ನಂತರ ಇದೇ ಫೋಟೋವನ್ನು ರಿಆರ್ಮಿಂಗ್ ಹಿಂದೂಯಿಸಂ ಎಂಬ ಗ್ರೂಪ್‌ನವರು ಫೇಸ್‌ಬುಕ್‌ನಲ್ಲಿ ಹಾಕಿ, ‘ಇವನು ವಲ್ಲಭ ದಾಸ್. ತ್ರಿವೇಂದ್ರಂನ ಸಿಪಿಎಂ ಕಾರ್ಯಕರ್ತ. ಇವನು ಕೇರಳ ಪೊಲೀಸ್ ಇಲಾಖೆಯವನಲ್ಲ. ಆದರೆ, ಈ ಗೂಂಡಾ ಪೊಲೀಸ್ ಸಮವಸ್ತ್ರ ಧರಿಸಿ ಅಯ್ಯಪ್ಪ ಭಕ್ತರ ಮೇಲೆ 5 ದಿನಗಳಿಂದ ದಾಳಿ ನಡೆಸುತ್ತಿದ್ದಾನೆ... ಲಾತ್ ಸಲಾಂ!!!’ ಎಂದು ಬರೆದಿದ್ದಾರೆ. 

ಆದರೆ, ಈ ಕುರಿತು ಶೋಧಿಸಿದಾಗ ಈ ವ್ಯಕ್ತಿಯ ಹೆಸರು ಆಶಿಕ್ ಜಫರ್ ಎಂದಾಗಿದ್ದು, ಈತ ನಿಜವಾಗಿಯೂ ಕೇರಳ ಸಶಸ್ತ್ರ ಪಡೆಯ ಪೊಲೀಸನೇ ಆಗಿದ್ದಾನೆ ಎಂದು ತಿಳಿದುಬಂದಿದೆ. ಕೇರಳ ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಪ್ರಕಟಣೆ ಹೊರಡಿಸಿ, ಕುಟ್ಟಿಕಾನಂನಲ್ಲಿರುವ 5ನೇ ಕೆಎಪಿ ಬೆಟಾಲಿಯಂನಲ್ಲಿ ಜಫರ್ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಜತೆ ಬರೆದಿರುವುದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದೆ.

Follow Us:
Download App:
  • android
  • ios