ಚೀನಾದ ಪೊಲೀಸರು ಕೈದಿಗಳೆಡೆಗೆ ಗನ್ ಹಿಡಿದಿರುವ  ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗೆ ಹರಿದಾಡುತ್ತಿರುವ ಫೋಟೋದೊಂದಿಗೆ ‘ಚೀನಾದ ಪೊಲೀಸರು 26 ಜನ ಭ್ರಷ್ಟ ರಾಜಕಾರಣ ಗಲ್ಲಿಗೇರಿಸಿದ್ದಾರೆ.

ಬೀಜಿಂಗ್ (ಜೂ. 20): ಚೀನಾದ ಪೊಲೀಸರು ಕೈದಿಗಳೆಡೆಗೆ ಗನ್ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗೆ ಹರಿದಾಡುತ್ತಿರುವ ಫೋಟೋದೊಂದಿಗೆ ‘ಚೀನಾದ ಪೊಲೀಸರು 26 ಜನ ಭ್ರಷ್ಟ ರಾಜಕಾರಣ ಗಲ್ಲಿಗೇರಿಸಿದ್ದಾರೆ.

ನಮ್ಮ ದೇಶದಲ್ಲಿ ಇದು ಏಕೆ ಸಾಧ್ಯವಿಲ್ಲ? ಪ್ರತಿಯೊಬ್ಬರಿಗೂ ಅದನ್ನು ಶೇರ್ ಮಾಡಿ’ ಎಂದು ಒಕ್ಕಣೆಯನ್ನೂ ಬರೆಯಲಾಗಿದೆ. ಫೇಸ್‌ಬುಕ್ ವಾಟ್ಸ್ ಆ್ಯಪ್‌ಗಳಲ್ಲಿ ಈ ಫೋಟೋ ವೈರಲ್ ಆಗಿದ್ದು, ಕೆಲವರು ‘ಭಾರತದಲ್ಲಿ ಇಂಥ ರಾಜ ಕಾರಣಿಗಳನ್ನು ಹೊಗಳುತ್ತಾರೆ. ಅವರಿಗೆ ಮತ ಹಾಕುತ್ತಾರೆ ಮತ್ತೆ ಅವರು ಜನರ ವಿರುದ್ಧವೇ ತಿರುಗಿ ಬೀಳುತ್ತಾರೆ ’ಎಂದು ಬರೆದುಕೊಂಡು ಶೇರ್ ಮಾಡಿದ್ದಾರೆ.

ಆದರೆ ನಿಜಕ್ಕೂ ಚೀನಾ ದಲ್ಲಿ ಭ್ರಷ್ಟ ರಾಜಕಾರಣಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆಯೇ? ಫೋಟೋದಲ್ಲಿರುವಂತೆ ರಾಜ ಕಾರಣಿಗಳೆಗೆ ಪೊಲೀಸರು ಗನ್ ಹಿಡಿದು ನಿಂತಿದ್ದರೇ ಎಂದರೆ ಉತ್ತರ ‘ಅಲ್ಲ’. ವಾಸ್ತವವಾಗಿ ಪೋಲೀಸರು ಗನ್ ಹಿಡಿದು ನಿಂತಿರುವುದು ರಾಜಕಾರಣಿಗಳಿಗಲ್ಲ. ಕ್ರಿಮಿನಲ್ ಗಳೆದುರು. ಅಲ್ಲದೆ ಈ ಫೋಟೋ ಈಗಿನದ್ದೂ ಅಲ್ಲ. 2004 ರಲ್ಲಿ ಚೀನಾ ಪೊಲೀಸರು ರ‌್ಯಾಲಿವೊಂದರಲ್ಲಿ ತಮ್ಮ ಬಲಪ್ರದರ್ಶನ ಮಾಡುತ್ತಿರುವ ಚಿತ್ರ. ಬಳಿಕ ಫೋಟೋದಲ್ಲಿರುವ 11 ಮಂದಿ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿತ್ತು.

ಏಪ್ರಿಲ್ 7, 2004 ರಂದು 11 ಜನ ಅಪರಾಧಿಗಳನ್ನು ಗಲ್ಲಿಗೇರಿಸಲು ರ‌್ಯಾಲಿ ಕೈಗೊಳ್ಳಲಾಗಿತ್ತು. ಹಲವಾರು ಪ್ರಕರಣಗಳಲ್ಲಿ ಆರೋಪಿಗಳು ದೋಷಿಗಳೆಂದು ಸಾಬೀತಾದ ಬಳಿಕ 11 ಜನ ತಪ್ಪಿತಸ್ಥರನ್ನು ಗಲ್ಲಿಗೇರಿಸಲಾಗಿತ್ತು. ಸರ್ಕಾರದ ಈ ಕ್ರಮದಿಂದಾಗಿ ಮುಗ್ಧ ಜನರೂ ಕೂಡ ಶಿಕ್ಷೆಗೆ ಒಳಗಾಗುತ್ತಿದ್ದಾರೆಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಚೀನಾದಲ್ಲಿ ಮರಣದಂಡನೆ ಶಿಕ್ಷೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿತ್ತು. ಹೀಗೆ ಚೀನಾದಲ್ಲಿ ನಡೆದ ರ‌್ಯಾಲಿಯೊಂದರ ಫೋಟೋವನ್ನೇ ಬಳಸಿಕೊಂಡು ಅಲ್ಲಿ ರಾಜಕಾರಣಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಬಿಂಬಿಸಿ ಸೋಷಿಯಲ್
ಮೀಡಿಯಾದಲ್ಲಿ ಹರಡಲಾಗಿದೆ.