ಭಾರತದಲ್ಲಿ ಲೋಕಸಭಾ ಚುನಾವಣೆಯ ಮತದಾನೋತ್ತರ ಫಲಿತಾಂಶ ಹೊರ ಬಿದ್ದ ದಿನ ಲಂಡನ್‌ನಲ್ಲಿರುವ ಸಾವಿರಾರು ಜನ ಬಿಜೆಪಿ ಬೆಂಬಲಿಗರು ದೊಡ್ಡ ಟೀವಿ ಸ್ಕ್ರೀನ್‌ನಲ್ಲಿ ಸಮೀಕ್ಷೆಗಳ ಫಲಿತಾಂಶ ವೀಕ್ಷಿಸಿ ಹರ್ಷ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಪಬ್‌ವೊಂದರಲ್ಲಿ ಜನರು ಜೋರಾಗಿ ಕೂಗುತ್ತಾ ಎನ್‌ಡಿಎಯ ಜಯಭೇರಿಯನ್ನು ಸಂಭ್ರಮಿಸುತ್ತಿರುವಂತೆ ಭಾಸವಾಗುತ್ತದೆ.

ಸದ್ಯ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ. ಆದರೆ ಈ ವಿಡಿಯೋ ಸತ್ಯಾಸತ್ಯ ಪರಿಶೀಲಿಸಿದಾಗ ಯಾವುದೋ ವಿಡಿಯೋವನ್ನು ತಿರುಚಿ ಹೀಗೆ ಮಾರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಟ್ವೀಟರ್‌ನಲ್ಲಿ ಪ್ರಸಿದ್ಧಿ ಪಡೆದ ಫೋಟೋ ಮತ್ತು ವಿಡಿಯೋ ಎಡಿಟರ್‌ ‘ಅತಹೆಇಸತ- ಕರಿಸಹನ’ ಅವರ ಹೆಸರು ಈ ವಿಡಿಯೋ ಮೇಲ್ಭಾಗದಲ್ಲಿದೆ. ಅವರ ಟೈಮ್‌ಲೈನ್‌ನಲ್ಲಿಯೂ ಈ ವಿಡಿಯೋ ಪತ್ತೆಯಾಗಿದೆ.

ಇದೇ ಟೆಂಪ್ಲೇಟ್‌ ಇದೇ ವರ್ಷ ಮಾಚ್‌ರ್‍ನಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ, ಭಾರತಕ್ಕೆ ಹಸ್ತಾಂತರಿಸಿದಾಗಲೂ ಜಾಲತಾಣಗಳಲ್ಲಿ ಹರಿದಾಡಿತ್ತು. ಅಭಿನಂದನ್‌ ವಾಪಸ್ಸಾಗಿರುವುದಕ್ಕೆ ಜನರು ಸಂತಸ ವ್ಯಕ್ತಪಡಿಸುತ್ತಿರುವಂತೆ ವಿಡಿಯೋವನ್ನು ಮಾರ್ಪಡಿಸಲಾಗಿತ್ತು.

ಕ್ವಿಂಟ್‌ ಸುದ್ದಿಸಂಸ್ಥೆ ಈ ಬಗ್ಗೆ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೂಲ ವಿಡಿಯೋ ಪತ್ತೆಯಾಗಿದೆ. 2016ರಲ್ಲಿ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದಾಗ ಅಲ್ಲಿನ ಜನರು ಸಂಭ್ರಮಿಸಿದ್ದ ವಿಡಿಯೋ ಅದು. ಇದೇ ಟೆಂಪ್ಲೇಟ್‌ ಬಳಸಿಕೊಂಡು ಸದ್ಯ ಸುಳ್ಳು ಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್