ನವದೆಹಲಿ :  ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ರಾಜಕೀಯಕ್ಕೆ ಆಹ್ವಾನಿಸಿದ್ದಾರೆ ಎಂಬ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ ಎನ್ನುವ ಸ್ಕ್ರೀನ್‌ಶಾಟ್‌ ಚಿತ್ರವನ್ನು ಪೋಸ್ಟ್‌ ಮಾಡಲಾಗುತ್ತಿದೆ. 

ಅದರಲ್ಲಿ, ‘ ಒಂದು ವೇಳೆ ವಿಂಗ್‌ ಕಮಾಂಡರ್‌ ತಮ್ಮ ಸೇವೆಯಿಂದ ನಿವೃತ್ತಿ ಬಯಸಿದಲ್ಲಿ, ಅವರು ಬಯಸಿದ ಕ್ಷೇತ್ರದಲ್ಲಿ ಲೋಕಸಭಾ ಟಿಕೆಟ್‌ ನೀಡಲು ಸಿದ್ಧ’ ಎಂದಿದೆ. @Satyanewshiಎಂಬ ಹೆಸರಿನ ಟ್ವೀಟರ್‌ ಖಾತೆ ಈ ಫೋಟೋವನ್ನು ಪೋಸ್ಟ್‌ ಮಾಡಿದೆ. ಅದೀಗ ವೈರಲ್‌ ಆಗಿದೆ.

ಆದರೆ ಈ ಟ್ವೀಟ್‌ನ ಸತ್ಯಾಸತ್ಯೆ ಪರಿಶೀಲಿಸಿದಾಗ ಇದು ನಕಲಿ ಟ್ವೀಟ್‌ ಎಂಬುದು ಬಯಲಾಗಿದೆ. ಸ್ಕ್ರೀನ್‌ಶಾಟ್‌ನಲ್ಲಿರುವ ಫಾಂಟ್‌ಗೂ ಟ್ವೀಟರ್‌ನ ಪ್ರಮಾಣಿತ ಫಾಂಟ್‌ಗೂ ಸಾಕಷ್ಟುವ್ಯತ್ಯಾಸವಿದೆ. ಎರಡನೆಯದಾಗಿ ಟ್ವೀಟ್‌ನ ಕೊನೆಯ ಸಾಲು, ದಿನಾಂಕದ ನಡುವಿನ ಅಂತರದಲ್ಲೂ ವ್ಯತ್ಯಾಸವಿದೆ. ಅಲ್ಲದೆ ಕೇಜ್ರೀವಾಲ್‌ ಅವರ ಟ್ವೀಟರ್‌ ಟೈಮ್‌ಲೈನ್‌ ಪರಿಶೀಲಿಸಿದಾಗ ಮಾಚ್‌ರ್‍ 3ರಂದು ಅವರು ಯಾವುದೇ ಟ್ವೀಟ್‌ ಮಾಡಿಲ್ಲ ಎಂದು ತಿಳಿದುಬಂದಿದೆ. ಅಲ್ಲಿಗೆ ಇದೊಂದು ನಕಲಿ ಟ್ವೀಟ್‌ ಎಂಬುದು ಸ್ಪಷ್ಟ.